ADVERTISEMENT

ಕರ್ತಾರಪುರ: ವೀಸಾಮುಕ್ತ ಭೇಟಿಗೆ ಮನವಿ

ಪಿಟಿಐ
Published 14 ಮಾರ್ಚ್ 2019, 20:05 IST
Last Updated 14 ಮಾರ್ಚ್ 2019, 20:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಟ್ಟಾರಿ: ಕರ್ತಾರಪುರ ಸಾಹಿಬ್ ಕಾರಿಡಾರ್ ನಿರ್ಮಾಣ ಕುರಿತು ಭಾರತ ಹಾಗೂ ಪಾಕಿಸ್ತಾನ ಗುರುವಾರ ನಿಯೋಗ ಮಟ್ಟದ ಸಭೆ ನಡೆಸಿತು.

‘ಪಾಕಿಸ್ತಾನದ ಕರ್ತಾರಪುರದಲ್ಲಿರುವ ದರ್ಬಾರ್ಸಾಹಿಬ್ಗುರುದ್ವಾರಕ್ಕೆ ಪ್ರತಿದಿನ ಭಾರತದ 5 ಸಾವಿರ ಸಿಖ್ ಯಾತ್ರಿಕರಿಗೆ ವೀಸಾಮುಕ್ತ ಭೇಟಿ ನೀಡಲು ಅವಕಾಶ ಕಲ್ಪಿಸಬೇಕು ಎಂದು ಭಾರತ ಈ ವೇಳೆ ಮನವಿ ಮಾಡಿದೆ’ ಎಂದು ಗೃಹ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಎಸ್‌.ಸಿ.ಎಲ್ ದಾಸ್ ತಿಳಿಸಿದ್ದಾರೆ.

ಈಚೆಗೆಬಾಲಾಕೋಟ್ ವಾಯುದಾಳಿ ನಡೆದ ನಂತರದಲ್ಲಿ ಉಭಯ ರಾಷ್ಟ್ರಗಳು ನಡೆಸಿದ ಮೊದಲ ಸಭೆ ಇದಾಗಿತ್ತು. ‘ವಾರದ ಏಳುದಿನವೂ,ಭಾರತೀಯರ ಜತೆಗೆ ಭಾರತ ಮೂಲದ ಸಿಖ್ಖರಿಗೂ ಭೇಟಿ ನೀಡಲು ಅವಕಾಶ ನೀಡಬೇಕು ಎಂದು ನಾವು ಕೇಳಿಕೊಂಡಿದ್ದೇವೆ’ ಎಂದು ಅವರು ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.