ADVERTISEMENT

ಜಮ್ಮು: ಭಾರತ ಗಡಿಯೊಳಗೆ ನುಸುಳಿದ ಪಾಕ್‌ ಪ್ರಜೆ

ಪಿಟಿಐ
Published 8 ಸೆಪ್ಟೆಂಬರ್ 2025, 14:14 IST
Last Updated 8 ಸೆಪ್ಟೆಂಬರ್ 2025, 14:14 IST
   

ಜಮ್ಮು: ಅಂತರರಾಷ್ಟ್ರೀಯ ಗಡಿಯಲ್ಲಿನ ಆರ್‌.ಎಸ್‌.ಪುರ ಸೆಕ್ಟರ್‌ನಲ್ಲಿ ಪಾಕಿಸ್ತಾನದ ನುಸುಳುಕೋರನನ್ನು ಬಂಧಿಸಲಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್ಎಫ್‌) ತಿಳಿಸಿದೆ. 

ನುಸುಳುಕೋರ ಸಿರಾಜ್‌ ಖಾನ್ ಭಾನುವಾರ ರಾತ್ರಿ 9.10ರ ಸುಮಾರಿಗೆ ಗಡಿ ದಾಟುತ್ತಿರುವುದು ಪತ್ತೆಯಾಗಿತ್ತು. ಸೇನಾಪಡೆಗಳು ಎಚ್ಚರಿಕೆ ನೀಡಿದರೂ ಕಿವಿಗೊಡದೆ ಗಡಿಯಲ್ಲಿ ನುಸುಳುತ್ತಿದ್ದ. ನಂತರ ಗುಂಡು ಹಾರಿಸಿ ಆತನನ್ನು ವಶಕ್ಕೆ ಪಡೆಯಲಾಯಿತು ಎಂದು ಬಿಎಸ್‌ಎಫ್‌ ಹೇಳಿಕೆಯಲ್ಲಿ ತಿಳಿಸಿದೆ.

ಆತನ ಬಳಿ ಇದ್ದ 20 ರೂಪಾಯಿ ಮತ್ತು 10 ರೂಪಾಯಿಯ ಎರಡು ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.