ಭಾರತ–ಪಾಕಿಸ್ತಾನ
– ಗೆಟ್ಟಿ ಚಿತ್ರ
ನವದೆಹಲಿ: ಪಾಕಿಸ್ತಾನದಲ್ಲಿನ ಉಗ್ರರ ನೆಲೆ ಗುರಿಯಾಗಿಸಿ ಭಾರತ ಸೇನೆಯು ನಡೆಸಿದ ನಿರ್ದಿಷ್ಟ ದಾಳಿಯ ಸ್ಥಳಗಳ ಹೊಸ ಪಟ್ಟಿಯನ್ನು ಪಾಕ್ ತಯಾರಿಸಿದೆ. ಈ ಪಟ್ಟಿಯಲ್ಲಿ ಹಿಂದೆ ಉಲ್ಲೇಖವಾಗದೇ ಇದ್ದ ಏಳು ಹೊಸ ತಾಣಗಳನ್ನು ಗುರುತಿಸಿದೆ.
ಪಾಕ್‌ನ ಹೊಸ ಪಟ್ಟಿಯ ಪ್ರಕಾರ, ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಪೆಶಾವರ್‌ನ ಅಟ್ಟೊಕ್, ಬಹವಲ್‌ನಗರ್, ಚೊರ್ ಹಾಗೂ ಸಿಂಧ್ ಪ್ರಾಂತ್ಯದ ಹೈದರಾಬಾದ್, ಪಂಜಾಬ್ ಪ್ರಾಂತ್ಯದ ಝಾಂಗ್, ಗುಜರಾತ್ ತಾಣಗಳಲ್ಲೂ ಭಾರತ ಸೇನೆ ದಾಳಿ ನಡೆಸಿದೆ.
‘ಆಪರೇಷನ್ ಸಿಂಧೂರ’ ಸೇನಾ ದಾಳಿಗೆ ಪ್ರತಿಯಾಗಿ ಪಾಕಿಸ್ತಾನವು ಕೈಗೊಂಡಿದ್ದ ಆಪರೇಷನ್ ಬನ್ಯಾನ್ ಉಮ್ ಮಾರ್ಸೂಸ್ ಕಾರ್ಯಾಚರಣೆ ಕುರಿತ ದಾಖಲೆಯಲ್ಲಿ ಈ ತಾಣಗಳನ್ನು ಪಾಕಿಸ್ತಾನ ಉಲ್ಲೇಖಿಸಿದೆ.
ಪಾಕಿಸ್ತಾನದ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾದ ಈ ದಾಖಲೆಯ ಗ್ರಾಫಿಕ್‌ಗಳು ಇದ್ದು, ಭಾರತವು ನಡೆಸಿದ ಡ್ರೋನ್ ದಾಳಿಯ ವಿವರಗಳನ್ನು ಒಳಗೊಂಡಿದೆ.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆ ಗುರಿಯಾಗಿಸಿ ಭಾರತವು ಮೇ 8, 9 ಮತ್ತು 10ರಂದು ದಾಳಿ ನಡೆಸಿತ್ತು. ಉಗ್ರ ಸಂಘಟನೆಗಳಾದ ಎಲ್‌ಇಟಿ ಜೊತೆಗೆ ಗುರುತಿಸಿಕೊಂಡಿರುವ ಮಾರ್ಕಜ್ ತಯಬಾ, ಜೈಶ್ ಎ ಮೊಹಮ್ಮದ್ ಮತ್ತು ಹಿಜ್ಬುಲ್ ಮೆಹಮೂನ್ ಜೊಯಾಗೆ ಸೇರಿದ ತಾಣಗಳ ಮೇಲೆ ದಾಳಿ ನಡೆಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.