ADVERTISEMENT

ಶ್ರೀನಗರ: ಪಾಕ್‌ ಉಗ್ರರು ಒಳನುಸುಳುವ ಯತ್ನ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 15:37 IST
Last Updated 4 ಏಪ್ರಿಲ್ 2020, 15:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಕೊರೊನಾ ಪರಿಸ್ಥಿತಿಯ ಲಾಭ ಪಡೆದು ಪಾಕಿಸ್ತಾನ ಸೇನೆಯು ಕೆಲ ದಿನಗಳಿಂದ ಉಗ್ರರನ್ನು ಭಾರತದ ಗಡಿ ಪ್ರದೇಶದತ್ತ ಕಳುಹಿಸುವ ಯತ್ನ ನಡೆಸುತ್ತಿದೆ.

ಜಮ್ಮು ಪ್ರಾಂತ್ಯದ ಪೂಂಚ್‌ ಹಾಗೂ ರಾಜೋರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯುದ್ಧಕ್ಕೂ ಒಂದು ವಾರದಿಂದ ಪಾಕಿಸ್ತಾನದ ಸೇನೆಯು ಶೆಲ್‌ ಹಾಗೂ ಗುಂಡಿನ ದಾಳಿಯನ್ನು ಮುಂದುವರೆಸಿದೆ.

ಕಣಿವೆ ಪ್ರದೇಶದಲ್ಲಿ ಕೋವಿಡ್‌-19 ಸೋಂಕು ತಡೆ ಹಾಗೂ ಲಾಕ್‌ಡೌನ್‌ನಿಂದ ಉಂಟಾದ ತೊಂದರೆ ಸರಿಪಡಿಸುವ ಕಾರ್ಯದಲ್ಲಿ ಪೊಲೀಸರು ಹಾಗೂ ಅರೆಸೇನಾ ಪಡೆಗಳು ತೊಡಗಿವೆ. ಈ ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸಿರುವ ಲಷ್ಕರ್‌–ಎ–ತೊಯ್ಬಾ ಹಾಗೂ ಜೈಶೆ–ಎ–ಮೊಹಮ್ಮದ್‌ ಸಂಘಟನೆಯ ಉಗ್ರರು ಪಾಕ್‌ ಸೇನೆಯ ನೆರವಿನೊಂದಿಗೆ ಭಾರತದ ಗಡಿ ಪ್ರವೇಶಿಸಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಉಗ್ರರು ಗಡಿ ನಿಯಂತ್ರಣ ರೇಖೆ ಬಳಿ ಒಳ ನುಸುಳಲು ಯತ್ನ ನಡೆಸಿದ್ದು, ಭದ್ರತಾ ಪಡೆ ಹಾಗೂ ಸಾರ್ವಜನಿಕರ ಮೇಲೆ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿವೆ. ಗಡಿ ನಿಯಂತ್ರಣ ರೇಖೆಯುದ್ಧಕ್ಕೂ ಹೈ ಅಲರ್ಟ್‌ ಘೋಷಿಸಲಾಗಿದ್ದು, ಪಾಕಿಸ್ತಾನದ ಯತ್ನ ಸಫಲವಾಗುವುದಿಲ್ಲ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.