ADVERTISEMENT

ಪಾಕ್‌ನಿಂದ ಮತ್ತೆ ಕದನ ವಿರಾಮ ಉಲ್ಲಂಘನೆ: ಅಪ್ರಚೋದಿತ ಗುಂಡಿನ ದಾಳಿ

ಪಿಟಿಐ
Published 13 ಜೂನ್ 2020, 7:05 IST
Last Updated 13 ಜೂನ್ 2020, 7:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಪಾಕಿಸ್ತಾನಿ ಪಡೆಗಳು ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಮತ್ತೊಮ್ಮೆ ಕದನ ವಿರಾಮ ಉಲ್ಲಂಘಿಸಿದ್ದು, ಜಮ್ಮು ಮತ್ತು ಕಾಶ್ಮೀರದ ಕಮಲ್‌ ಕೋಟ್‌ ಸೆಕ್ಟರ್‌ನಲ್ಲಿ ಶನಿವಾರ ಅಪ್ರಚೋದಿತ ಗುಂಡಿನ ದಾಳಿ ನಡೆಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಕ್‌ ಪಡೆಗಳು ಬೆಳಿಗ್ಗೆ 9.20ರ ಸುಮಾರಿಗೆ ಉತ್ತರ ಕಾಶ್ಮೀರದ ಬಾರಾಮುಲ್ಲ ಜಿಲ್ಲೆಯ ಉರಿ ಪ್ರದೇಶ ಕಮಲ್‌ ಕೋಟ್‌ ಸೆಕ್ಟರ್‌ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಈಗಲೂ ಅದು ಮುಂದುವರೆದಿದೆ. ಭಾರತೀಯ ಸೇನೆಯು ಪ್ರತಿ ದಾಳಿ ನಡೆಸುವ ಮೂಲಕ ಸೂಕ್ತ ಪ್ರತಿಕ್ರಿಯೆ ನೀಡುತ್ತಿದೆ ಎಂದು ಅವರು ಹೇಳಿದ್ದಾರೆ.

ಶುಕ್ರವಾರವೂ ಪಾಕ್‌ ಪಡೆಗಳು ಕದನ ವಿರಾಮ ಉಲ್ಲಂಘಿಸಿ ನಡೆಸಿದ ಶೆಲ್‌ ದಾಳಿಗೆ ರಾಂಪುರ ಸೆಕ್ಟರ್‌ನಲ್ಲಿ 48 ವರ್ಷದ ಅಖ್ತರ್‌ ಬೇಗಂ ಎಂಬುವರು ಅವರ ಮನೆಯಲ್ಲೇ ಮೃತಪಟ್ಟಿದ್ದರು. 23 ವರ್ಷದ ಯುವತಿಯೊಬ್ಬರು ಈ ದಾಳಿಯಲ್ಲಿ ಗಾಯಗೊಂಡಿದ್ದರು.

ADVERTISEMENT

ಪಾಕ್‌ ಪಡೆಗಳ ಅಪ್ರಚೋದಿತ ಗುಂಡಿನ ದಾಳಿಯಿಂದ ನಾಲ್ಕು ಮನೆಗಳು ಮತ್ತು ಒಂದು ಮಸೀದಿಗೆ ಹಾನಿಯಾಗಿದೆ. ಇಲ್ಲಿನ ಹಲವು ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.