ADVERTISEMENT

ಜಾರ್ಖಂಡ್ ಸಿ.ಎಂ ಆಪ್ತರ ಮೇಲೆ ಇ.ಡಿ ದಾಳಿ: ಪಂಕಜ್ ಮಿಶ್ರಾ 6 ದಿನ ಕಸ್ಟಡಿಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜುಲೈ 2022, 16:21 IST
Last Updated 26 ಜುಲೈ 2022, 16:21 IST
ಜಾರಿ ನಿರ್ದೇಶನಾಲಯ
ಜಾರಿ ನಿರ್ದೇಶನಾಲಯ   

ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ರಾಜಕೀಯ ಪ್ರತಿನಿಧಿ ಪಂಕಜ್ ಮಿಶ್ರಾ ಅವರನ್ನು ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ನ್ಯಾಯಾಲಯವು ಪಂಕಜ್ ಮಿಶ್ರಾ ಅವರನ್ನು 6 ದಿನಗಳ ಕಾಲ ಇ.ಡಿ ಕಸ್ಟಡಿಗೆ ನೀಡಿದೆ.

ಜುಲೈ 8ರಂದು ‘ಟೋಲ್‌ ಪ್ಲಾಜಾ ಟೆಂಡರ್‌’ಗಳ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಕಜ್ ಮಿಶ್ರಾ ಮತ್ತು ಅವರೊಂದಿಗೆ ನಂಟು ಹೊಂದಿರುವವರ ವಿರುದ್ಧ ಸುಮಾರು 18 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ದಾಳಿ ನಡೆಸಿ ₹5.32 ಕೋಟಿ ವಶಪಡಿಸಿಕೊಂಡಿತ್ತು.

ADVERTISEMENT

ಪ್ರಕರಣಕ್ಕೆ ಸಂಬಂಧಿಸಿ ಪಂಕಜ್ ಮಿಶ್ರಾ ಅವರಿಗೆ ಸೇರಿದ ಇನ್ನೂ ಕೆಲವು ಸ್ಥಳಗಳಲ್ಲಿ ದಾಳಿ ಮುಂದುವರಿದಿದೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.