ADVERTISEMENT

ಭಾರಿ ಗಾಳಿ: ಕೆಳಗೆ ಬಿದ್ದ ಪ್ಯಾರಾಗ್ಲೈಡರ್‌

ಪಿಟಿಐ
Published 31 ಮೇ 2025, 16:26 IST
Last Updated 31 ಮೇ 2025, 16:26 IST
.
.   

ಮಂಡಿ: ಬಾನಂಗಳದಲ್ಲಿ ಹಾರಾಟ ನಡೆಸುತ್ತಿದ್ದಾಗ ಭಾರಿ ಗಾಳಿ ಬೀಸಿದ್ದರಿಂದ, ನಿಯಂತ್ರಣ ಕಳೆದುಕೊಂಡ ಪ್ಯಾರಾಗ್ಲೈಡರ್‌ ಒಬ್ಬರು ಜಿಲ್ಲೆಯ ಗ್ರಾಮವೊಂದರ ಕಟ್ಟಡದ ಮಹಡಿ ಮೇಲೆ ಬಿದ್ದು ಗಾಯಗೊಂಡಿದ್ದಾರೆ.

ಬಿಹಾರದ ವಿಜಯ್‌ಕುಮಾರ್‌ ಗಾಯಗೊಂಡವರು.

ಸ್ನೇಹಿತರೊಂದಿಗೆ ವಿಜಯ್‌ ಪ್ಯಾರಾಗ್ಲೈಂಡಿಗ್‌ನಲ್ಲಿ ಪಾಲ್ಗೊಂಡಿದ್ದರು. ಗೆಳೆಯರು ನಿಗದಿಪಡಿಸಿದ್ದ ಸ್ಥಳದಲ್ಲಿ ನಿಖರವಾಗಿ ಇಳಿದರೆ, ಇವರು 20 ಕಿ.ಮೀ. ದೂರಕ್ಕೆ ತೆರಳಿದರು ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ADVERTISEMENT

ಪ್ಯಾರಾಗ್ಲೈಂಡಿಗ್‌ನಲ್ಲಿ 18 ವರ್ಷಗಳ ಅನುಭವ ಹೊಂದಿರುವ ಇವರು, ಬಾನಿನಿಂದ ನೆಲಕ್ಕೆ ಇಳಿಯುವಾಗ ನಿಯಂತ್ರಣ ತಪ್ಪಿ ಮಂಡಿ ಜಿಲ್ಲೆಯ ಜೋಗಿಂದರ್‌ ನಗರದ ಪೆಹಲುಮ್‌ ಗ್ರಾಮದ ಕಟ್ಟಡವೊಂದರ ಮಹಡಿ ಮೇಲೆ ಬಿದ್ದರು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರು.

ವೈದ್ಯರ ಶಿಫಾರಸಿನ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಾಂಗರಾ ಜಿಲ್ಲೆಯ ಟಾಂಡಾ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ವಿಜಯ್‌ಕುಮಾರ್‌ ಅವರ ಕೈ ಹಾಗೂ ಕಾಲಿನ ಮೂಳೆಗಳು ಮುರಿದಿವೆ ಎಂದು ಜೋಗಿಂದರ್‌ನ ವೈದ್ಯಕೀಯ ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.