ADVERTISEMENT

ಕಾಶ್ಮೀರ: ಕಲಾಪದಿಂದ ಹೊರನಡೆದ ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ ಸದಸ್ಯರು

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2019, 7:54 IST
Last Updated 18 ನವೆಂಬರ್ 2019, 7:54 IST
ಚಳಿಗಾಲದ ಅಧಿವೇಶನ
ಚಳಿಗಾಲದ ಅಧಿವೇಶನ    

ನವದೆಹಲಿ: ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಲೋಕಸಭಾ ಕಲಾಪದಿಂದ ಹೊರ ನಡೆದು ಪ್ರತಿಭಟಿಸಿದೆ. ಮಹಾರಾಷ್ಟ್ರದಲ್ಲಿ ರೈತರ ಸಂಕಷ್ಟ ವಿಷಯ ಪ್ರಸ್ತಾಪಿಸಿ ಶಿವಸೇನೆ ಕಲಾಪದಿಂದ ಹೊರನಡೆದಿತ್ತು. ಇದಾದನಂತರ ಜಮ್ಮು ಮತ್ತು ಕಾಶ್ಮೀರದಲ್ಲಿನ ನಿರ್ಬಂಧ ಹೇರಿಕೆ ಮತ್ತು ನಾಯಕರ ಬಂಧನವನ್ನು ಪ್ರಶ್ನಿಸಿ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಕಲಾಪ ಬಹಿಷ್ಕರಿಸಿದೆ.

ಲೋಕಸಭೆಯಲ್ಲಿ 'ಫಾರೂಕ್ ಅಬ್ದುಲ್ಲಾ ಬಿಡುಗಡೆ ಮಾಡಿ' ಮತ್ತು 'ನ್ಯಾಯಬೇಕು' ಕೂಗು
ವಿಪಕ್ಷವನ್ನು ಪ್ರತಿನಿಧಿಕರಿಸುತ್ತಿರುವ ಕಾಂಗ್ರೆಸ್, ಡಿಎಂಕೆ ಮತ್ತು ಎನ್‌ಸಿಪಿ ಪಕ್ಷದ ಸಂಸದರೊಂದಿಗೆ ಸೇರಿ ತನ್ಹಾಶಾಹಿ ಬಂದ್ ಕರೋ ( ಅಧಿಕಾರಶಾಹಿ ನಿಲ್ಲಿಸಿ) ಎಂದು ಘೋಷಣೆ ಕೂಗಿದೆ. ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಅವರನ್ನು ಬಿಡುಗಡೆ ಮಾಡಿ ಎಂದು ಒತ್ತಾಯಿಸಿದ ಸದಸ್ಯರು ನ್ಯಾಯ ಬೇಕು ಎಂದು ಕೂಗಿದ್ದಾರೆ.

ವಿಷಯಾಧಾರಿತ ಚರ್ಚೆಗಳಿಗೆ ಸಹಕರಿಸಿ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಮತ್ತು ಸ್ಪೀಕರ್ ಓಂ ಬಿರ್ಲಾ ಅವರು ಮನವಿ ಮಾಡಿದರೂ ಪ್ರತಿಭಟನೆ ನಿಲ್ಲಲಿಲ್ಲ.
ಕೇಂದ್ರ ಸರ್ಕಾರ ಎಲ್ಲ ಸಮಸ್ಯೆಗಳನ್ನು ಚರ್ಚಿಸಲು ಸಿದ್ಧವಾಗಿದೆ. ನಾವು ಚರ್ಚಿಸೋಣ. ಕಲಾಪಕ್ಕೆ ತೊಂದರೆಯನ್ನುಂಟು ಮಾಡಬೇಡಿ ಎಂದು ನಾನು ಕೈ ಮುಗಿದು ಬೇಡಿಕೊಳ್ಳುತ್ತೇನೆ ಎಂದಿದ್ದಾರೆ ಪ್ರಹ್ಲಾದ ಜೋಷಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.