ADVERTISEMENT

ಮಹಿಳೆ ವಿವಾಹ ಕನಿಷ್ಠ ವಯಸ್ಸು:ಸ್ಥಾಯಿ ಸಮಿತಿ ಅವಧಿ ವಿಸ್ತರಣೆ

ಪಿಟಿಐ
Published 22 ಮಾರ್ಚ್ 2022, 13:49 IST
Last Updated 22 ಮಾರ್ಚ್ 2022, 13:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ಮಹಿಳೆಗೆ ವಿವಾಹಕ್ಕೆ ಅರ್ಹವಾದ ಕನಿಷ್ಠ ವಯಸ್ಸು ವಿಷಯ ಪರಿಶೀಲಿಸುತ್ತಿರುವ ಸಂಸದೀಯ ಸ್ಥಾಯಿ ಸಮಿತಿಯ ಅವಧಿಯನ್ನು ಮೂರು ತಿಂಗಳು ವಿಸ್ತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಹಿಳೆ, ಮಕ್ಕಳು, ಯುವಜನ ಮತ್ತು ಕ್ರೀಡಾ ವ್ಯವಹಾರ ಕುರಿತ ಸಮಿತಿಯು, ಕನಿಷ್ಠ ವಯಸ್ಸು ನಿಗದಿ ಕುರಿತ ‘ಬಾಲ್ಯವಿವಾಹ ನಿಷೇಧ (ತಿದ್ದುಪಡಿ) ಮಸೂದೆ 2021’ ಪರಿಶೀಲಿಸುತ್ತಿದೆ. ಸಮಿತಿ ಗುರುವಾರ ವರದಿ ಸಲ್ಲಿಸಬೇಕಿತ್ತು. ಈಗ ಜೂನ್‌ 24ಕ್ಕೆ ಸಲ್ಲಿಸಲಿದೆ.

ಮಹಿಳೆಗೆ ವಿವಾಹಕ್ಕೆ ಕನಿಷ್ಠ ವಯಸ್ಸನ್ನು ಈಗಿನ 18 ವರ್ಷದಿಂದ 21ಕ್ಕೆ ಏರಿಸುವ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಇದಕ್ಕೆ ಮಹಿಳಾ ಹಕ್ಕುಗಳ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾದಂತೆ ಸಮಿತಿಯ ಪರಿಶೀಲನೆಗೆ ಇದನ್ನು ಒಪ್ಪಿಸಲಾಗಿತ್ತು.

ADVERTISEMENT

ಕನಿಷ್ಠ ವಯಸ್ಸು ಏರಿಕೆಗೆ ಪೂರಕವಾಗಿ ಭಾರತೀಯ ಕ್ರೈಸ್ತರ ವಿವಾಹ ಕಾಯ್ದೆ, ಪಾರ್ಸಿ ವಿವಾಹ ಮತ್ತು ವಿಚ್ಛೇದನ ಕಾಯ್ದೆ, ಮುಸ್ಲಿಂ ವೈಯಕ್ತಿಕ ಕಾನೂನು (ಶರಿಯತ್‌) ಕಾಯಿದೆ, ವಿಶೇಷ ವಿವಾಹ ಕಾಯ್ದೆ, ಹಿಂದೂ ವಿವಾಹ ಕಾಯ್ದೆ ಮತ್ತು ವಿದೇಶಿ ವಿವಾಹ ಕಾಯ್ದೆಗೆ ತಿದ್ದುಪಡಿ ತರಲು ಮಸೂದೆ ರಚಿಸಲಾಗಿದೆ. ಹಾಲಿ ಇರುವ ಎಲ್ಲ ಕಾಯ್ದೆ, ಸಂಪ್ರದಾಯ, ಆಚರಣೆ ಮೀರಿ ಕನಿಷ್ಠ ವಯಸ್ಸು ನಿಗದಿಸಲು ಮಸೂದೆ ಒತ್ತು ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.