ADVERTISEMENT

ಹಳೆಯ ಸಂಸತ್ ಭವನದಲ್ಲೇ ಚಳಿಗಾಲದ ಅಧಿವೇಶನ

ಪಿಟಿಐ
Published 31 ಅಕ್ಟೋಬರ್ 2022, 13:22 IST
Last Updated 31 ಅಕ್ಟೋಬರ್ 2022, 13:22 IST
ಸಂಸತ್ ಭವನ 
ಸಂಸತ್ ಭವನ    

ನವದೆಹಲಿ: ಸೆಂಟ್ರಲ್ ವಿಸ್ತಾದ ಭಾಗವಾಗಿರುವ ನೂತನ ಸಂಸತ್ ಭವನದ ಕಾಮಗಾರಿಯು ಇನ್ನೂ ಬಾಕಿ ಉಳಿದಿರುವ ಕಾರಣ, ಈ ವರ್ಷದ ಚಳಿಗಾಲದ ಅಧಿವೇಶನವನ್ನು ಹಳೆಯ ಸಂಸತ್ ಭವನದಲ್ಲೇ ನಡೆಸಲಾಗುವುದು ಎಂದು ಮೂಲಗಳು ಸೋಮವಾರ ತಿಳಿಸಿವೆ.

ಸಾಮಾನ್ಯವಾಗಿ ಚಳಿಗಾಲದ ಅಧಿವೇಶನ ನವೆಂಬರ್‌ ಮೂರನೇ ವಾರದಲ್ಲಿ ಆರಂಭವಾಗುತ್ತದೆ.ಈ ಬಾರಿಯ ಚಳಿಗಾಲದ ಅಧಿವೇಶನಕ್ಕೂ ಮುನ್ನವೇ ಹೊಸ ಸಂಸತ್ ಭವನದ ಕಾಮಗಾರಿಯನ್ನು ಪೂರ್ಣಗೊಳಿಸುವ ಉದ್ದೇಶವನ್ನು ಕೇಂದ್ರ ಸರ್ಕಾರವು ಹೊಂದಿತ್ತು. ಆದರೆ, ನಿಗದಿತ ದಿನಾಂಕದೊಳಗೆ ಕಾಮಗಾರಿ ಪೂರ್ಣಗೊಂಡಿಲ್ಲವಾದ್ದರಿಂದ ಹಳೆಯ ಸಂಸತ್ ಭವನದಲ್ಲೇ ಚಳಿಗಾಲದ ಅಧಿವೇಶನ ನಡೆಯಲಿದೆ.

ಸೆಂಟ್ರಲ್ ವಿಸ್ತಾ ಕಟ್ಟಡ ಸಂಕೀರ್ಣದ ಬಹುತೇಕ ಕಾಮಗಾರಿಗಳು ಮುಗಿದಿದ್ದು, ಎಲೆಕ್ಟ್ರಿಕಲ್ ಸೇರಿದಂತೆ ಇನ್ನಿತರ ಅಂತಿಮ ಕೆಲಸಗಳಷ್ಟೇ ಬಾಕಿ ಇವೆ. ಈ ಕೆಲಸಗಳು ಈ ವರ್ಷಾಂತ್ಯದೊಳಗೆ ಮುಗಿಯಲಿವೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಮುಂದಿನ ಬಜೆಟ್ ಅಧಿವೇಶನದ ಮೊದಲ ದಿನದಂದು ಸಂಸತ್ತಿನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವು ಹೊಸ ಸಂಸತ್ ಭವನದಲ್ಲಿ ನಡೆಯಲಿವೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.