ADVERTISEMENT

ಕಾಶ್ಮೀರದಲ್ಲಿ ಕರ್ಫ್ಯೂ ಇಲ್ಲ, ಸಹಜ ಸ್ಥಿತಿ: ರಾಜ್ಯಸಭೆಯಲ್ಲಿ ಅಮಿತ್ ಶಾ ಹೇಳಿಕೆ

ಸಂಸತ್ ಚಳಿಗಾಲದ ಅಧಿವೇಶನ

ಏಜೆನ್ಸೀಸ್
Published 20 ನವೆಂಬರ್ 2019, 7:37 IST
Last Updated 20 ನವೆಂಬರ್ 2019, 7:37 IST
ಅಮಿತ್ ಶಾ (ಸಂಗ್ರ ಚಿತ್ರ)
ಅಮಿತ್ ಶಾ (ಸಂಗ್ರ ಚಿತ್ರ)   

ನವದೆಹಲಿ:ಜಮ್ಮು–ಕಾಶ್ಮೀರದಲ್ಲಿ ಕರ್ಫ್ಯೂ ಹೇರಲಾಗಿಲ್ಲ. ರಾಜ್ಯವು ಸಹಜ ಸ್ಥಿತಿಗೆ ಮರಳಿದೆ ಎಂದು ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ತಿಳಿಸಿದರು.

ಕಾಶ್ಮೀರದ ಸ್ಥಿತಿಗತಿ ವರದಿ ಮಂಡಿಸಿದ ಅವರು ಜಮ್ಮು–ಕಾಶ್ಮೀರದಲ್ಲಿ ಅಂತರ್ಜಾಲ ಸೇವೆ ಸ್ಥಗಿತಗೊಳಿಸಿರುವ ಕ್ರಮವನ್ನು ಸಮರ್ಥಿಸಿದರು. ಈ ವಿಚಾರದಲ್ಲಿ ಮುಂದಿನ ನಿರ್ಧಾರವನ್ನು ಸ್ಥಳಿಯಾಡಳಿತ ಪರಾಮರ್ಶಿಸಲಿದೆ ಎಂದು ಅವರು ಹೇಳಿದರು.

ಕಾಶ್ಮೀರ ಪ್ರದೇಶದಲ್ಲಿಯೂ ಪಾಕಿಸ್ತಾನದ ಕುಮ್ಮಕ್ಕಿನಿಂದಚಟುವಟಿಕೆಗಳು ನಡೆಯುತ್ತಿವೆ. ಹೀಗಾಗಿ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಲಾಗಿದೆ. ಯಾವಾಗ ಅಂತರ್ಜಾಲ ಸೇವೆ ಪುನರಾರಂಭಿಸಬೇಕು ಎಂಬುದನ್ನು ಸಂದರ್ಭ ನೋಡಿಕೊಂಡು ಅಲ್ಲಿನ ಆಡಳಿತವೇ ನಿರ್ಧರಿಸಲಿದೆ ಎಂದು ಶಾ ಹೇಳಿದರು.

ADVERTISEMENT

ಜಮ್ಮು–ಕಾಶ್ಮೀರದ ಯಾವುದೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಕರ್ಫ್ಯೂ ಹೇರಲಾಗಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು. ಕಣಿವೆ ರಾಜ್ಯದಲ್ಲಿ ಔಷಧಿಗಳ ಲಭ್ಯತೆ ಸಮರ್ಪಕವಾಗಿದೆ. ಸಂಚಾರಿ ಔಷಧಿ ವಾಹನಗಳೂ ಕಾರ್ಯಾಚರಿಸುತ್ತಿವೆ. ಆರೋಗ್ಯ ಸೇವೆಗಳ ಬಗ್ಗೆ ಆಡಳಿತವು ಗಮನಹರಿಸಿದೆ ಎಂದು ಶಾ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.