ADVERTISEMENT

ಮುಂಬೈ ಕಟ್ಟಡ ಕುಸಿತ: ಅವಶೇಷಗಳಡಿ ಮಹಿಳೆ ಸಿಲುಕಿರುವ ಶಂಕೆ

ಪಿಟಿಐ
Published 2 ಸೆಪ್ಟೆಂಬರ್ 2020, 6:50 IST
Last Updated 2 ಸೆಪ್ಟೆಂಬರ್ 2020, 6:50 IST
ಮುಂಬೈ ಕಟ್ಟಡದ ಹಿಂಭಾಗ ಕುಸಿತ  –ಟ್ವಿಟರ್‌ ಚಿತ್ರ
ಮುಂಬೈ ಕಟ್ಟಡದ ಹಿಂಭಾಗ ಕುಸಿತ  –ಟ್ವಿಟರ್‌ ಚಿತ್ರ   

ಮುಂಬೈ: ಇಲ್ಲಿನ ಡೊಂಗ್ರಿ ಪ್ರಾಂತ್ಯದಲ್ಲಿ ಬುಧವಾರ ಬೆಳಿಗ್ಗೆ ಎಂಟು ಅಂತಸ್ತಿನ ಕಟ್ಟಡದ ಹಿಂಭಾಗ ಕುಸಿದಿದ್ದು, ಕಟ್ಟಡದ ಅವಶೇಷಗಳಡಿ ಮಹಿಳೆಯೊಬ್ಬರು ಸಿಲುಕಿರುವ ಶಂಕೆಯಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಬೆಳಿಗ್ಗೆ 7.30ರ ಸುಮಾರಿಗೆ ಡೊಂಗ್ರಿ ಪ್ರದೇಶದ ಸರ್ದಾರ್ ವಲ್ಲಭಭಾಯಿ ಪಟೇಲ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಹಳೆಯ ಕಟ್ಟಡದ ಮೂರನೇ ಮತ್ತು ಏಳನೇ ಮಹಡಿಗಳ ನಡುವಿನ ಸಂಪೂರ್ಣ ಹಿಂಭಾಗ ಕುಸಿದಿದೆ ಎಂದು ಅವರು ಮಾಹಿತಿ ನೀಡಿದರು.

‌ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ, ಆಂಬುಲೆನ್ಸ್‌ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.