ಸಾಂದರ್ಭಿಕ ಚಿತ್ರ
ಕೊಟ್ಟಾಯಂ: ಮದುರೈಗೆ ತೆರಳುತ್ತಿದ್ದ ರೈಲಿನಲ್ಲಿದ್ದ ಪ್ರಯಾಣಿಕ ಕಾರ್ತಿಕ್ ಎನ್ನುವವರಿಗೆ ಸೋಮವಾರ ಹಾವು ಕಚ್ಚಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮದುರೈ–ಗುರುವಾಯೂರು ಪ್ಯಾಸೆಂಜರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ರೀತಿ ಆಗಿದೆ. ಕಾರ್ತಿಕ್ ಅವರನ್ನು ಎಟ್ಟಮಾನೂರ್ ನಿಲ್ದಾಣದಲ್ಲಿ ರೈಲಿನಿಂದ ಇಳಿಸಿ ಆಸ್ಪತ್ರೆಗೆ ದಾಖಲಿಸಲಾಯಿತು.
ಕಾರ್ತಿಕ್ ಅವರು ಆರನೆಯ ಬೋಗಿಯಲ್ಲಿ ಇದ್ದರು. ಅವರು ಕುಳಿತಿದ್ದ ಸೀಟಿನ ಅಡಿಯಲ್ಲಿ ಇದ್ದ ಹಾವು ಕಚ್ಚಿದೆ. ಕಾರ್ತಿಕ್ ಅವರ ಸ್ಥಿತಿ ಸ್ಥಿರವಾಗಿದೆ ಎಂದು ರೈಲ್ವೆ ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.