ADVERTISEMENT

Pune Airport: ಜೀವಂತ ಗುಂಡುಗಳ ಜೊತೆ ರಿವಾಲ್ವರ್ ಸಾಗಿಸುತ್ತಿದ್ದ ವ್ಯಕ್ತಿ ಬಂಧನ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 2:55 IST
Last Updated 22 ಸೆಪ್ಟೆಂಬರ್ 2025, 2:55 IST
<div class="paragraphs"><p>ಅಂತರರಾಷ್ಟ್ರೀಯ ವಿಮಾನ ನಿಲ್ದಾಣ</p></div>

ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

   

ಪುಣೆ: ಜೀವಂತ ಗುಂಡುಗಳ ಜೊತೆ ರಿವಾಲ್ವರ್ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬರನ್ನು ಪುಣೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ಈ ಘಟನೆ ಸೆಪ್ಟೆಂಬರ್ 19 ರಂದು ನಡೆದಿದೆ ಎಂದು ಪುಣೆ ವಿಮಾನ ನಿಲ್ದಾಣದ ಪೊಲೀಸರು ತಿಳಿಸಿದ್ದಾರೆ. ವ್ಯಕ್ತಿಯ ಗುರುತು ಬಹಿರಂಗಪಡಿಸಿಲ್ಲ.

ADVERTISEMENT

ಬಂಧಿತ ವ್ಯಕ್ತಿ ಪುಣೆಯಿಂದ ವಾರಾಣಸಿಗೆ ಹೋಗುವರಿದ್ದರು. ವಿಮಾನ ನಿಲ್ದಾಣಕ್ಕೆ ಬ್ಯಾಗ್ ಸಮೇತ ಬಂದಿದ್ದ ಅವರು ಬ್ಯಾಗ್‌ನಲ್ಲಿ ಜೀವಂತ ಗುಂಡುಗಳ ಜೊತೆ ರಿವಾಲ್ವರ್ ಸಾಗಿಸುತ್ತಿದ್ದರು. ಈ ವಿಚಾರ ತಪಾಸಣೆ ವೇಳೆ ತಿಳಿದು ಬಂದಿತ್ತು ಎಂದು ಹೇಳಿದ್ದಾರೆ.

ಆರೋಪಿತ ವ್ಯಕ್ತಿ, ಮಹಾರಾಷ್ಟ್ರದಲ್ಲಿ ಮಾತ್ರ ರಿವಾಲ್ವರ್ ಬಳಸಲು ಪರವಾನಗಿ ಪಡೆದಿದ್ದರು. ಆದರೆ, ಹೊರರಾಜ್ಯಕ್ಕೆ ರಿವಾಲ್ವರ್ ಏಕೆ ತೆಗೆದುಕೊಂಡು ಹೋಗುತ್ತಿದ್ದರು ಎಂಬುದು ತನಿಖೆಯಿಂದ ತಿಳಿದು ಬರಲಿದೆ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.