ಅಹಮದಾಬಾದ್: ಪಾಟೀದಾರ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ತಮ್ಮ ಬಾಲ್ಯದ ಗೆಳತಿ ಕಿಂಜಾಲ್ ಪರಿಕ್ಜೊತೆ ಗುಜರಾತಿನ ದಿಗ್ಸಾರ್ ಜಿಲ್ಲೆಯ ಸುರೇಂದ್ರ ನಗರದ ದೇವಾಲಯದಲ್ಲಿ ಸರಳ ವಿವಾಹವಾಗಿದ್ದಾರೆ.
ವಿವಾಹವು ಪಟೇಲ್ ಸಮುದಾಯದ ಸಂಪ್ರದಾಯದಂತೆ ಜರುಗಿತು. 2016ರಲ್ಲಿಯೇ ಇವರಿಬ್ಬರ ನಿಶ್ಚಿತಾರ್ಥ ನೆರವೇರಿತ್ತು.
ಕಿಂಜಾಲ್ ಪರಿಕ್ ಪದವಿ ಮುಗಿಸಿದ್ದು, ಗಾಂಧಿನಗರದಲ್ಲಿ ಎಲ್‌ಎಲ್‌ಬಿ ವ್ಯಾಸಂಗ ಮಾಡುತ್ತಿದ್ದಾರೆ. ಮೂಲತಃ ವಿರಾಮ್‌ಘಮ್‌ದವರಾದ ಪರಿಕ್ ಕುಟುಂಬ ಇದೀಗ ಸೂರತ್‌ನಲ್ಲಿ ನೆಲೆಸಿದೆ.
ವಿವಾಹದಲ್ಲಿ ಸಂಬಂಧಿಕರು ಹಾಗೂ ಸ್ನೇಹಿತರು ಸೇರಿದಂತೆ ಕೇವಲ 100 ಮಂದಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.