ADVERTISEMENT

ರಾಮಮಮಂದಿರ ನಿರ್ಮಿಸಿದ್ದಕ್ಕೆ ಬಿಜೆಪಿಗೆ ಮತ ಹಾಕುತ್ತಾರೆ ಎಂದಲ್ಲ: ರಾಜ್ ಠಾಕ್ರೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2024, 15:39 IST
Last Updated 2 ಫೆಬ್ರುವರಿ 2024, 15:39 IST
ರಾಜ್ ಠಾಕ್ರೆ 
ರಾಜ್ ಠಾಕ್ರೆ    

ನಾಸಿಕ್‌: ರಾಮಮಂದಿರ ನಿರ್ಮಾಣ ಮಾಡಿದ್ದಕ್ಕೆ ಜನರು ಸಂತೋಷಪಟ್ಟಿದ್ದಾರೆ, ಅದರ ಅರ್ಥ ಲೋಕಸಭೆ ಚುನಾವಣೆಯಲ್ಲಿ ಜನರು ಬಿಜೆಪಿಗೇ ಮತ ಹಾಕುತ್ತಾರೆ ಎಂದಲ್ಲ ಎಂದು ಮಾಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇದೆ, ಯಾರು ಗೆಲ್ಲಬಹುದು ಎಂದು ಊಹಿಸಲು ಸಾಧ್ಯವಿಲ್ಲ. ರಾಮ ಮಂದರ ನಿರ್ಮಿಸಿದ ಮಾತ್ರಕ್ಕೆ ಜನರು ಬಿಜೆಪಿಗೆ ಮತ ಹಾಕುತ್ತಾರೆ ಎಂದರ್ಥವಲ್ಲ. ಚುನಾವಣೆ ನಡೆಯಲಿ’ ಎಂದರು. 

ಮರಾಠಾ ಮೀಸಲಾತಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮರಾಠಾ ಸಮುದಾಯದವರ ಮೀಸಲಾತಿ ವಿಚಾರ ಬಿಟ್ಟು ಎಲ್ಲಾ ಬೇಡಿಕೆಗಳನ್ನು ಸ್ವೀಕರಿಸಲಾಗಿದೆ ಎಂದರು. ಟೋಲ್‌ ಪ್ಲಾಜಾಗಳಲ್ಲಿ ಹಣ ಸಂಗ್ರಹದ ಕುರಿತು ಮುಖ್ಯಮಂತ್ರಿ ಏಕನಾಥ ಶಿಂಧೆ ಅವರನ್ನು ಭೇಟಿಯಾಗುತ್ತಿದ್ದೇನೆ. ಎಲ್ಲಾ ಕಡೆ ಟೋಲ್‌ ಹಣವನ್ನು ಪಡೆಯುತ್ತಾರೆ. ಅದರ ವಿರುದ್ಧವಾಗಿ ನಾನು ಮಾತನಾಡುತ್ತಿಲ್ಲ. ಆದರೆ ಅದರ ವ್ಯವಹಾರದಲ್ಲಿ ಪಾರದರ್ಶಕತೆ ಇರಬೇಕು. ಸರ್ಕಾರದ ಬೊಕ್ಕಸಕ್ಕೆ ಆ ಹಣ ಹೋದರೆ ಒಳ್ಳೆಯದು. ಬದಲಾಗಿ ಟೋಲ್‌ ಸಂಗ್ರಹಿಸುವವರ ಜೇಬಿಗೆ ಅಥವಾ ರಾಜಕೀಯ ಪಕ್ಷದ ಉಪಯೋಗಕ್ಕೆ ಹೋದರೆ ಅದು ತಪ್ಪು ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.