ADVERTISEMENT

ಪಶ್ಚಿಮ ಬಂಗಾಳ: ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ರಾಜ್ಯಪಾಲರಿಂದ ಶೀಘ್ರ ಭೇಟಿ

ಪಿಟಿಐ
Published 10 ಮೇ 2021, 10:11 IST
Last Updated 10 ಮೇ 2021, 10:11 IST
ಜಗದೀಪ್ ಧನ್‌ಕರ್‌
ಜಗದೀಪ್ ಧನ್‌ಕರ್‌   

ಕೋಲ್ಕತ್ತಾ: ಚುನಾವಣೆ ನಂತರ ಪಶ್ಚಿಮ ಬಂಗಾಳದ ಕೆಲವೆಡೆ ಹಿಂಸಾಚಾರ ನಡೆದಿರುವ ಪ್ರದೇಶಗಳಲ್ಲಿ ಪರಿಸ್ಥಿತಿ ಆತಂಕಕಾರಿಯಾಗಿದ್ದು, ಶೀಘ್ರದಲ್ಲೇ ಆ ಪ್ರದೇಶಗಳಿಗೆ ಭೇಟಿ ನೀಡುವುದಾಗಿ ರಾಜ್ಯಪಾಲ ಜಗದೀಪ್ ಧನ್‌ಕರ್‌ ಹೇಳಿದರು.

ರಾಜಭವನದಲ್ಲಿ ಸೋಮವಾರ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಮೊದಲು ಪೂರ್ವ ಸಿದ್ಧತೆಯ ಅಗತ್ಯವಿದೆ. ಈ ಕುರಿತು ರಾಜ್ಯ ಸರ್ಕಾರಕ್ಕೆ ತಿಳಿಸಿದ್ದರೂ, ಸರ್ಕಾರದಿಂದ ಇಲ್ಲಿವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ‘ ಎಂದು ಹೇಳಿದರು.

‘ಜನರು ತಮ್ಮ ಹಕ್ಕನ್ನು ಚಲಾಯಿಸಲು ಜೀವವನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿರುವುದು ಆಘಾತಕಾರಿ. ನಿಮ್ಮದೊಂದು ಮತ, ನಿಮ್ಮ ಸಾವಿಗೆ ಅಥವಾ ಆಸ್ತಿ ನಾಶಕ್ಕೆ ಕಾರಣವಾಗುತ್ತದೆ ಎಂದರೆ, ಅದು ಪ್ರಜಾಪ್ರಭುತ್ವದ ಅಂತ್ಯವನ್ನು ಸೂಚಿಸುತ್ತದೆ‘ ಎಂದು ರಾಜ್ಯಪಾಲರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.