
ನರೇಂದ್ರ ಮೋದಿ
ನವದೆಹಲಿ: ‘ವಿರೋಧ ಪಕ್ಷಗಳದ್ದು ಘಟಬಂಧನ್ ಅಲ್ಲ, ಲಟಬಂಧನ್ (ಅಪರಾಧಿಗಳ ಕೂಟ)’ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ವಾಗ್ದಾಳಿ ನಡೆಸಿದರು.
ಘಟಬಂಧನ್‌ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ತೇಜಸ್ವಿ ಯಾದವ್ ಅವರನ್ನು ಘೋಷಿಸಿದ ಬೆನ್ನಿಗೆ, ಪ್ರತಿಪಕ್ಷಗಳ ಒಕ್ಕೂಟದ ವಿರುದ್ಧ ಟೀಕಾ ಪ್ರಹಾರ ನಡೆಸಿದ ಅವರು, ‘ಮೈತ್ರಿಕೂಟದಲ್ಲಿರುವ ನವದೆಹಲಿ ಹಾಗೂ ಬಿಹಾರದ ಎಲ್ಲ ನಾಯಕರು ಜಾಮೀನಿನ ಮೇಲೆ ಹೊರಗಿದ್ದಾರೆ’ ಎಂದು ಕಟಕಿಯಾಡಿದರು.
‘ಬಿಹಾರದಲ್ಲಿದ್ದ ಜಂಗಲ್ ರಾಜ್ ಆಡಳಿತವನ್ನು ಇನ್ನೂ ನೂರು ವರ್ಷ ಚರ್ಚಿಸಲಾಗುವುದು. ಪ್ರತಿಪಕ್ಷಗಳು ತಮ್ಮ ದುಷ್ಕೃತ್ಯಗಳನ್ನು ಮರೆಮಾಚಲು ಎಷ್ಟೇ ಪ್ರಯತ್ನಿಸಿದರೂ ಜನರು ಕ್ಷಮಿಸುವುದಿಲ್ಲ’ ಎಂದಿದ್ದಾರೆ.
‘ಆರ್‌ಜೆಡಿ ವರಿಷ್ಠ ಲಾಲೂ ಪ್ರಸಾದ್ ಅವರ ಆಡಳಿತದ ಅವಧಿಯ ‘ಜಂಗಲ್ ರಾಜ್’ನಲ್ಲಿ ನಡೆದ ದೌರ್ಜನ್ಯಗಳ ಬಗ್ಗೆ ಹಿರಿಯರು, ಯುವಕರಿಗೆ ತಿಳಿಸುವುದನ್ನು ಖಚಿತಪಡಿಸಿಕೊಳ್ಳಿ’ ಎಂದು ಮೋದಿ ಅವರು ಬಿಜೆಪಿ ಕಾರ್ಯಕರ್ತರಿಗೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.