ADVERTISEMENT

ಉನ್ನತ ಹುದ್ದೆಗಳಲ್ಲಿ ಮಹಿಳೆಯರ ನೇಮಕ ಕ್ಷೀಣ: ಅಧ್ಯಯನ ನಡೆಸಲು ಪಿಇಎಸ್‌ಬಿ ಸೂಚನೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 10:21 IST
Last Updated 24 ಮಾರ್ಚ್ 2021, 10:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸಾರ್ವಜನಿಕ ವಲಯದ ಉನ್ನತ ವ್ಯವಸ್ಥಾಪಕ ಹುದ್ದೆಗಳಿಗೆ ನೇಮಕವಾಗುತ್ತಿರುವ ಮಹಿಳಾ ಅಭ್ಯರ್ಥಿಗಳ ಶೇಕಡವಾರು ಪ್ರಮಾಣ ತೀರಾ ಕಡಿಮೆ ಇರುವುದನ್ನು ಗಮನಿಸಿರುವ ಸಂಸದೀಯ ಸಮಿತಿ, ಈ ಬಗ್ಗೆ ಆಳವಾದ ಅಧ್ಯಯನ ನಡೆಸುವಂತೆ ಸಾರ್ವಜನಿಕ ಉದ್ಯಮಗಳ ಆಯ್ಕೆ ಮಂಡಳಿಗೆ(ಪಿಎಸ್par‌ಇಬಿ) ತಿಳಿಸಿದೆ.

‘ಸಮರ್ಥ ಅಭ್ಯರ್ಥಿಗಳ ಕೊರತೆಯಿಂದಾಗಿ ಉನ್ನತ ಹುದ್ದೆಗಳಲ್ಲಿ ಮಹಿಳೆಯರ ನೇಮಕಾತಿ ಕಡಿಮೆಯಾಗಿದೆಯೇ ಅಥವಾ ಆಯ್ಕೆ ಪ್ರಕ್ರಿಯೆಯಲ್ಲಿನ ನಿಬಂಧನೆಗಳು ಇದಕ್ಕೆ ಕಾರಣವೇ, ಎಂಬುದನ್ನು ಪರಿಶೀಲಿಸುವಂತೆ ಪಿಇಎಸ್‌ಬಿಗೆ ಸಂಸದೀಯ ಸಮಿತಿ ತಿಳಿಸಿದೆ.

ಸಾರ್ವಜನಿಕ ವಲಯದ ಉದ್ಯಮಗಳಿಗೆ ಸಂಬಂಧಿಸಿ ನೀತಿಯನ್ನು ರೂಪಿಸುವ ಮತ್ತು ನಿರ್ದಿಷ್ಟವಾಗಿ ಉನ್ನತ ಹುದ್ದೆಗಳ ನೇಮಕಾತಿ ಕುರಿತು ಸರ್ಕಾರಕ್ಕೆ ಸಲಹೆ ನೀಡುವ ಉದ್ದೇಶದಿಂದ ಸಾರ್ವಜನಿಕ ಉದ್ಯಮಗಳ ಆಯ್ಕೆ ಮಂಡಳಿಯನ್ನು (ಪಿಇಎಸ್‌ಬಿ) ಸ್ಥಾಪಿಸಲಾಗಿದೆ.

ADVERTISEMENT

ಈ ಮಂಡಳಿ ಒಬ್ಬ ಅರೆಕಾಲಿಕ ಅಥವಾ ಪೂರ್ಣಾವಧಿಯ ಅಧ್ಯಕ್ಷರು ಮತ್ತು ಮೂವರು ಸದಸ್ಯರನ್ನು ಒಳಗೊಂಡಿರುತ್ತದೆ. ಪ್ರಸ್ತುತ, ಪಿಇಎಸ್‌ಬಿ ಇಬ್ಬರು ಸದಸ್ಯರನ್ನು ಹೊಂದಿದೆ. ಇತ್ತೀಚೆಗೆ ಸಂಸತ್ತಿನಲ್ಲಿ ಮಂಡಿಸಲಾದ ಸಮಿತಿಯ ವರದಿಯ ಪ್ರಕಾರ ಅಧ್ಯಕ್ಷರು ಮತ್ತು ಒಬ್ಬ ಸದಸ್ಯರ ಹುದ್ದೆಗಳು ಖಾಲಿ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.