ADVERTISEMENT

ಜ್ಞಾನವಾಪಿ: ಪೂಜೆಗೆ ಅವಕಾಶ ಕೋರಿದ್ದ ಅರ್ಜಿ ವಿಚಾರಣೆಗೆ ಅಸ್ತು– ಅರ್ಜಿದಾರರ ಸಂತಸ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಸೆಪ್ಟೆಂಬರ್ 2022, 10:58 IST
Last Updated 12 ಸೆಪ್ಟೆಂಬರ್ 2022, 10:58 IST
   

ಲಖನೌ: ಜ್ಞಾನ ವಾಪಿ ಮಸೀದಿಯ ಹೊರಗಿನ ಗೋಡೆ ಮೇಲೆ ಇದೆ ಎನ್ನಲಾದ ಶೃಂಗಾರ ಗೌರಿ ಮೂರ್ತಿ ಪೂಜೆಗೆ ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಾರಾಣಸಿ ಜಿಲ್ಲಾ ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿದ್ದು, ಈ ಬಗ್ಗೆ ಅರ್ಜಿದಾರರು ಸಂತಸ ವ್ಯಕ್ತಪಡಿಸಿದ್ದಾರೆ.

‘ಇಡೀ ಭಾರತಕ್ಕೆ ಇಂದು ಆನಂದವಾಗಿದೆ. ನಮ್ಮ ಹಿಂದೂ ಸಹೋದರ ಮತ್ತು ಸಹೋದರಿಯರು ದೀಪಗಳನ್ನು ಬೆಳಗಿ ಸಂಭ್ರಮಾಚರಣೆ ಮಾಡಬೇಕು’ಎಂದು ಮಂಜು ವ್ಯಾಸ್ ಹೇಳಿದ್ದಾರೆ.

ನೃತ್ಯ ಮಾಡುತ್ತಾ ಅವರು ಸಂಭ್ರಮಾಚರಣೆ ಮಾಡಿದ್ದು, ಸುದ್ದಿ ಸಂಸ್ಥೆ ಎಎನ್‌ಐ ವಿಡಿಯೊ ಟ್ವೀಟಿಸಿದೆ.

ADVERTISEMENT

‘ಎಲ್ಲೆಡೆ ಆನಂದದ ಅಲೆ ಇದೆ. ಹಲವರು ಫೋನ್ ಮೂಲಕ ಸಂತಸವನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಹೈಕೋರ್ಟ್ ಮೊರೆ ಹೋಗುವುದು ಪ್ರತಿವಾದಿ ಅರ್ಜಿದಾರರ ಹಕ್ಕು. ಆದರೆ, ನಾವು ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು’ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಹೇಳಿದ್ದಾರೆ.

ಇದು ಹಿಂದೂ ಸಮುದಾಯಕ್ಕೆ ಸಿಕ್ಕ ಜಯ. ಇದು ಜ್ಞಾನವಾಪಿ ಮಂದಿರ ನಿರ್ಮಾಣಕ್ಕೆ ಅಡಿಪಾಯ. ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡುತ್ತೇನೆ ಎಂದು ವಕೀಲ ಸೋಹನ್ ಲಾಲ್ ಆರ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.