ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ‘ಡಾನಾ’ ಚಂಡಮಾರುತ ಸೃಷ್ಟಿಯಾಗಿದೆ
ಚಿತ್ರ: ಪಿಟಿಐ
ಇಂದು (ಶುಕ್ರವಾರ) ಬೆಳಿಗ್ಗೆ ಒಡಿಶಾ, ಪಶ್ಚಿಮ ಬಂಗಾಳಕ್ಕೆ ಚಂಡಮಾರುತ ಅಪ್ಪಳಿಸಿದ್ದು, ಭಾರಿ ಮಳೆಯಾಗುತ್ತಿದೆ
ಒಡಿಶಾ ಕರಾವಳಿ ಪ್ರದೇಶದಲ್ಲಿರುವ ‘ಧಮರಾ ಬಂದರು’ ಮೇಲೆ ‘ಡಾನಾ’ ಅಪ್ಪಳಿಸಿದ್ದು, ಸಮುದ್ರದ ಅಲೆಗಳು 2 ಮೀಟರ್‌ನಷ್ಟು ಎತ್ತರಕ್ಕೆ ಏರಿದೆ.
ಡಾನಾ ಚಂಡಮಾರುತದಿಂದ ಒಡಿಶಾದಲ್ಲಿ ಭೂಕುಸಿತ ಸಂಭವಿಸುವ ದೃಷ್ಟಿಯಿಂದ ಕಡಲತೀರದ ಬಳಿ ಗಸ್ತು ತಿರುಗುತ್ತಿರುವ ಪೊಲೀಸ್ ವಾಹನಗಳು
ಚಂಡಮಾರುತದ ಬೆನ್ನಲ್ಲೇ ಒಡಿಶಾದಲ್ಲಿ ಇದುವರೆಗೆ ಸುಮಾರು 6 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ
ಚಂಡಮಾರುತದ ಹಿನ್ನೆಲೆಯಿಂದ ಧಮರಾ ನದಿ ನೀರಿನ ಮಟ್ಟವು ಹೆಚ್ಚಿದ ಬಳಿಕ ಮೀನುಗಾರರು ತಮ್ಮ ದೋಣಿಗಳನ್ನು ದಡಕ್ಕೆ ತರುತ್ತಿರುವ ದೃಶ್ಯ
ಡಾನಾ ಚಂಡಮಾರುತದಿಂದ ಅಪ್ಪಳಿಸುವಿಕೆಯಿಂದ ಪಶ್ಚಿಮ ಬಂಗಾಳದಲ್ಲಿ ಬಲವಾಗಿ ಬೀಸುತ್ತಿರುವ ಗಾಳಿ
ಡಾನಾ ಚಂಡಮಾರುತದ ಅಪ್ಪಳಿಸುವಿಕೆಯಿಂದ ಭೂಕುಸಿತವಾಗುವ ಸಂಭವ ಕುರಿತು ಸ್ಥಳೀಯ ಆಡಳಿತ ಅಧಿಕಾರಿಯೊಬ್ಬರು ಕಡಲತೀರದ ಬಳಿ ಘೋಷಣೆ ಕೂಗುತ್ತಿರುವುದು
ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ದಿಘಾದಲ್ಲಿ ಚಂಡಮಾರುತದಿಂದ ಧರೆಗುರುಳಿರುವ ಮರಗಳನ್ನು ತೆಗೆದುಹಾಕುತ್ತಿರುವ ಜನರು
ಒಡಿಶಾ, ಪುರಿಯ ರಸ್ತೆಗಳಲ್ಲಿ ಸಂಚಾರ ನಡೆಸುತ್ತಿರುವ ಪ್ರಯಾಣಿಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.