ADVERTISEMENT

ಅಮಿತ್‌ ಶಾ ಹೇಳ್ತಾರೆ ‘ಅಭಿನಂದನ್ ವಾಪಸಾತಿ ನಮ್ಮ ರಾಜತಾಂತ್ರಿಕ ಗೆಲುವು’

ಪಿಟಿಐ
Published 1 ಮಾರ್ಚ್ 2019, 11:56 IST
Last Updated 1 ಮಾರ್ಚ್ 2019, 11:56 IST
   

ನವದೆಹಲಿ: ಪಾಕ್ ತನ್ನ ವಶದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಭಾರತಕ್ಕೆ ತುರ್ತಾಗಿ ಹಸ್ತಾಂತರಿಸುವಂಥ ಪರಿಸ್ಥಿತಿ ನಿರ್ಮಿಸಿದ್ದುನಮ್ಮ ರಾಜತಾಂತ್ರಿಕ ಗೆಲುವು ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿದರು.

‘ಇಂಡಿಯಾ ಟುಡೆ’ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಶಾ, ‘ಪುಲ್ವಾಮಾದಲ್ಲಿ ಭದ್ರತಾಪಡೆಗಳ ಬಸ್ ಮೇಲೆ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದನ್ನು ಭಾರತ ಹಗುರವಾಗಿ ತೆಗೆದುಕೊಳ್ಳಲಿಲ್ಲ. ವಾಯುದಾಳಿಯ ನಂತರ ಪಾಕಿಸ್ತಾನವು ಜಾಗತಿಕವಾಗಿ ಏಕಾಂಗಿಯಾಗಿದೆ. ಅಭಿನಂದನ್ ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲೇಬೇಕಾದ ಒತ್ತಡವನ್ನು ಕ್ಷಿಪ್ರಗತಿಯಲ್ಲಿ ಪಾಕಿಸ್ತಾನದ ಮೇಲೆ ಹೇರಿದ್ದು ನಮ್ಮ ರಾಜತಾಂತ್ರಿಕ ವಿಜಯ’ ಎಂದು ಅವರು ವಿವರಿಸಿದರು.

‘ಪಾಕ್ ಬಂಧನದಲ್ಲಿದ್ದ ನಮ್ಮ ಪೈಲಟ್‌ ಸುರಕ್ಷಿತವಾಗಿ ಬಿಡುಗಡೆಯಾಗಿರುವುದು ಸಂತಸದ ವಿಷಯ. ಜಿನೆವಾ ಒಪ್ಪಂದದ ಅನ್ವಯ ಪಾಕಿಸ್ತಾನ ಈ ಕ್ರಮ ಕೈಗೊಂಡಿದೆ’ ಎಂದು ವಾಯುಪಡೆಯ ಉಪಮುಖ್ಯಸ್ಥ ಆರ್‌.ಜಿ.ಕೆ.ಕಪೂರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.