ADVERTISEMENT

ಪಿಣರಾಯಿ ಮತ್ತೊಮ್ಮೆ ಸಿಎಂ ಆಗುವುದು ಖಚಿತ: ಅಯ್ಯರ್

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 21:44 IST
Last Updated 15 ಫೆಬ್ರುವರಿ 2026, 21:44 IST
ಮಣಿಶಂಕರ್‌ ಅಯ್ಯರ್‌
ಮಣಿಶಂಕರ್‌ ಅಯ್ಯರ್‌   

ತಿರುವನಂತಪುರ: ‘ಪಿಣರಾಯಿ ವಿಜಯನ್‌ ಅವರು ಮತ್ತೊಮ್ಮೆ ಕೇರಳ ಮುಖ್ಯಮಂತ್ರಿಯಾಗುವುದು ಖಚಿತ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಮಣಿಶಂಕರ್‌ ಅಯ್ಯರ್‌ ಹೇಳಿದ್ದಾರೆ. 

ಕೇರಳ ರಾಜ್ಯ ಯೋಜನಾ ಮಂಡಳಿಯು ಭಾನುವಾರ ಆಯೋಜಿಸಿದ್ದ ‘ವಿಷನ್‌ 2031: ಅಭಿವೃದ್ಧಿ ಮತ್ತು ಪ್ರಜಾಪ್ರಭುತ್ವದ ಕುರಿತ ಅಂತರರಾಷ್ಟ್ರೀಯ ಸಮ್ಮೇಳನ’ದಲ್ಲಿ ಮಾತನಾಡಿದ ಅವರು, ‘ಪಂಚಾಯತ್‌ ರಾಜ್‌ ವ್ಯವಸ್ಥೆ ಅನುಷ್ಠಾನದಲ್ಲಿ ಕೇರಳ ರಾಜ್ಯ ಮುಂಚೂಣಿಯಲ್ಲಿದೆ’ ಎಂದು ಬಣ್ಣಿಸಿದ್ದಾರೆ.

‘ಕರ್ನಾಟಕವು ಪಂಚಾಯತ್‌ ರಾಜ್‌ಗೆ ಸಂಬಂಧಿಸಿದಂತೆ ಅತ್ಯುತ್ತಮ ಕಾನೂನುಗಳನ್ನು ಹೊಂದಿದೆ. ಕೇರಳವು ಕೂಡ ಕಾನೂನುಗಳಿಗೆ ತಿದ್ದುಪಡಿ ತರಬೇಕು’ ಎಂದರು.

ADVERTISEMENT

‘ವೈಯಕ್ತಿಕ ಹೇಳಿಕೆ’: ಪಿಣರಾಯಿ ವಿಜಯನ್‌ ಕುರಿತು ಮಣಿಶಂಕರ್‌ ಅಯ್ಯರ್ ಹೇಳಿಕೆಯಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ. ‘ಇದು ಅಯ್ಯರ್ ಅವರ ವೈಯಕ್ತಿಕ ಹೇಳಿಕೆ’ ಎಂದು ಕಾಂಗ್ರೆಸ್‌ ಪಕ್ಷದ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್‌ ಖೇರಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.