ADVERTISEMENT

ಕಣ್ಣಿನ ಊತವೂ ಕೋವಿಡ್‌–19 ಲಕ್ಷಣ?

ಪಿಟಿಐ
Published 19 ಜೂನ್ 2020, 16:54 IST
Last Updated 19 ಜೂನ್ 2020, 16:54 IST
ಕೊರೊನಾ ವೈರಸ್‌ ಸೋಂಕು–ಸಾಂಕೇತಿಕ ಚಿತ್ರ
ಕೊರೊನಾ ವೈರಸ್‌ ಸೋಂಕು–ಸಾಂಕೇತಿಕ ಚಿತ್ರ   

ಟೊರಂಟೊ: ಕಣ್ಣಿನ ಊತ(ಕಾಂಜೈಕ್ಟಿವೈಟಿಸ್)ಕೂಡಾ ಕೊರೊನಾ ವೈರಸ್‌ ಸೋಂಕಿನ ಲಕ್ಷಣವಾಗಿರುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು ತಿಳಿಸಿದೆ.

ಕೆನಡಾದ ನೇತ್ರವಿಜ್ಞಾನಕ್ಕೆ ಸಂಬಂಧಿಸಿದ ನಿಯತಕಾಲಿಕ ಆಫ್‌ತಲ್ಮಾಲಜಿಯಲ್ಲಿ ಈ ಕುರಿತು ಅಧ್ಯಯನ ವರದಿ ಪ್ರಕಟವಾಗಿದೆ. ಮಾರ್ಚ್‌ 29ರಂದು ಕಣ್ಣಿನ ಊತಕ್ಕೆ ಒಳಗಾಗಿದ್ದ 29 ವರ್ಷದ ಮಹಿಳೆಯೊಬ್ಬರುಇಲ್ಲಿನ ರಾಯಲ್‌ ಅಲೆಕ್ಸಾಂಡ್ರ ಆಸ್ಪತ್ರೆಗೆ ಆಗಮಿಸಿದ್ದರು. ಇವರಿಗೆ ಯಾವುದೇ ಉಸಿರಾಟದ ಸಮಸ್ಯೆ ಇರಲಿಲ್ಲ. ಹಲವು ದಿನಗಳ ಚಿಕಿತ್ಸೆ ಬಳಿಕವೂ ಇವರು ಪೂರ್ಣವಾಗಿ ಗುಣಮುಖರಾಗಿರಲಿಲ್ಲ. ಏಷ್ಯಾ ರಾಷ್ಟ್ರಗಳಿಗೆ ಹೋಗಿದ್ದ ಇತಿಹಾಸ ಹೊಂದಿದ್ದ ಕಾರಣ, ನಂತರದಲ್ಲಿ ಅವರನ್ನು ಕೋವಿಡ್‌–19 ಪರೀಕ್ಷೆಗೆ ಒಳಪಡಿಸಲಾಗಿತ್ತು. ಆ ಸಂದರ್ಭದಲ್ಲಿ ಸೋಂಕು ಇರುವುದು ದೃಢಪಟ್ಟಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

‘ಈ ಪ್ರಕರಣದಲ್ಲಿ ಮಹಿಳೆಗೆ ಸೋಂಕಿನ ಇತರೆ ಯಾವುದೇ ಲಕ್ಷಣಗಳು ಇರಲಿಲ್ಲ. ಆದರೆ ಕಣ್ಣಿನ ಊತ ಮಾತ್ರ ಇತ್ತು. ಹೀಗಾಗಿ ಆರಂಭದಲ್ಲಿ ನಾವು ಕೋವಿಡ್‌–19 ಇರಬಹುದು ಎಂದು ಊಹಿಸಿರಲಿಲ್ಲ. ನಮ್ಮ ಅಧ್ಯಯನದ ಪ್ರಕಾರ ಶೇ 10–15 ಕೋವಿಡ್‌–19 ಪ್ರಕರಣಗಳಲ್ಲಿ ಕಣ್ಣಿನ ಊತವು ಸೋಂಕಿನ ಎರಡನೇ ಲಕ್ಷಣವಾಗಿದೆ’ ಎಂದು ಕೆನಡಾದ ಆಲ್ಬರ್ಟ ವಿಶ್ವವಿದ್ಯಾಲಯದ ಪ್ರೊ.ಕಾರ್ಲೊಸ್‌ ಸೊಲಾರ್ಟೆ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.