ನಾಗ್ಪುರ: ‘ನನ್ನ ಮಗಳ ಜೊತೆ ಇಂದು ಬೆಳಿಗ್ಗೆ 9ರ ಸುಮಾರಿಗೆ ಮಾತನಾಡಿದ್ದೆ. ಈಗ, ನನಗಾಗಲಿ, ನನ್ನ ಕುಟುಂಬಕ್ಕಾಗಲಿ ಅವರ ಸ್ಥಿತಿ ಬಗ್ಗೆ ಏನೂ ಗೊತ್ತಿಲ್ಲ. ಏರ್ ಇಂಡಿಯಾ ಅಥವಾ ಗುಜರಾತ್ ಸರ್ಕಾರದ ಪ್ರತಿನಿಧಿಗಳು ನಮ್ಮನ್ನು ಈ ವರೆಗೆ ಸಂಪರ್ಕಿಸಿಲ್ಲ...’
–ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುವಾಗ ಪತನಗೊಂಡಿರುವ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಯಶಾ ಮೋಧಾ ಅವರ ತಂದೆ ಮನೀಷ್ ಕಾಮದಾರ್ ಹೇಳುವ ಮಾತುಗಳಿವು.
‘ನನ್ನ ಮಗಳು ಯಶಾ ಮೋಧಾ, ಆಕೆಯ ಒಂದೂವರೆ ವರ್ಷದ ಮಗ ರುದ್ರ ಹಾಗೂ ಅತ್ತೆ ಈ ನತದೃಷ್ಟ ವಿಮಾನದಲ್ಲಿದ್ದರು. ಈಗ, ಅವರ ಸ್ಥಿತಿ ಏನಿದೆಯೋ ಎಂಬ ಬಗ್ಗೆ ಸುಳಿವೇ ಇಲ್ಲದಂತಾಗಿದೆ’ ಎಂದು ಮನೀಷ್ ದುಃಖಿಸಿದ್ದಾರೆ.
‘ನನ್ನ ಅಳಿಯ ಅಹಮದಾಬಾದ್ ಸರ್ಕಾರಿ ಆಸ್ಪತ್ರೆ ಬಳಿ ಇದ್ದಾನೆ. ಆತನನ್ನು ಒಳಗೆ ಬಿಡುತ್ತಿಲ್ಲ. ಈ ಮೂವರ ಕುರಿತು ಆತನಿಗೂ ಮಾಹಿತಿ ಸಿಗುತ್ತಿಲ್ಲ’ ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.