ADVERTISEMENT

‘ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಟ್ರೇಲರ್ ನಿಷೇಧ ಕೋರಿ ದೆಹಲಿ ಹೈಕೋರ್ಟ್‌ಗೆ ಅರ

ಏಜೆನ್ಸೀಸ್
Published 6 ಜನವರಿ 2019, 3:37 IST
Last Updated 6 ಜನವರಿ 2019, 3:37 IST
   

ನವದೆಹಲಿ: ವಿವಾದಿತ ‘ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರದ ಟ್ರೇಲರ್‌ ನಿಷೇಧಿಸಬೇಕು ಎಂದು ಕೋರಿ ದೆಹಲಿ ಹೈಕೋರ್ಟ್‌ಗೆ ಶನಿವಾರ ಅರ್ಜಿಯೊಂದನ್ನು ಸಲ್ಲಿಸಲಾಗಿದೆ.

ದೇಶದ ಎಲ್ಲ ಸಂವಿಧಾನಾತ್ಮಕ ಸಂಸ್ಥೆಗಳನ್ನು ಗೌರವಿಸಬೆಕು ಎಂಬ ಸಂವಿಧಾನದ ಆಶಯವನ್ನು ಈ ಚಿತ್ರದ ನಿರ್ಮಾಪಕರು ಉಲ್ಲಂಘಿಸಿದ್ದಾರೆ. ಪ್ರಧಾನಿ ಕಚೇರಿಯ ಘನನೆಯನ್ನು ಹಾಳು ಮಾಡುವ ಮೂಲಕವಾಣಿಜ್ಯ ಲಾಭ ಗಳಿಸಬೇಕು ಎನ್ನುವ ಉದ್ದೇಶ ನಿರ್ಮಾಪಕರಿಗೆ ಇರುವಂತಿದೆ. ಪ್ರಧಾನಿಯ ಹುದ್ದೆಯ ಘನೆ ಕುಂದಿಸುವ ಹಲವು ದೃಶ್ಯಗಳು ಟ್ರೇಲರ್‌ನಲ್ಲಿವೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಮನಮೋಹನ್ ಸಿಂಗ್ ಅವರಿಗೆ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್ ಬರು ಅವರು ಬರೆದಿರುವ ಅದೇ ಹೆಸರಿನ ಪುಸ್ತಕ ಆಧರಿಸಿದ ಸಿನಿಮಾ ‘ದಿ ಆಕ್ಸಿಡೆಂಟಲ್ ಪ್ರೈಮ್ಮಿನಿಸ್ಟರ್’. ಅನುಪಮ್ ಖೇರ್ ಮತ್ತು ಅಕ್ಷಯ್ ಖನ್ನಾ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ADVERTISEMENT

ದೆಹಲಿ ಮೂಲದ ಫ್ಯಾಷನ್ ಡಿಸೈನರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಆದರೆ ಎಲ್ಲಿಯೂ ಅವರ ಹೆಸರು ಉಲ್ಲೇಖಿಸಿಲ್ಲ.‘ಜೀವಂತ ವ್ಯಕ್ತಿಯ ಚಾರಿತ್ರ್ಯ ಹರಣ ಮಾಡುವ ಯತ್ನಕ್ಕೆ ಕಾನೂನು ಅವಕಾಶ ಕೊಡುವುದಿಲ್ಲ. ಚಿತ್ರದ ಟ್ರೇಲರ್ ಭಾರತ ದಂಡ ಸಂಹಿತೆಯ 416ನೇ ಸೆಕ್ಷನ್‌ ಉಲ್ಲಂಘಿಸುತ್ತದೆ’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಈ ಚಿತ್ರದ ಟ್ರೇಲರ್ ಪ್ರದರ್ಶನ ತಡೆಗೆ ಕ್ರಮ ವಹಿಸುವಂತೆ ಕೇಂದ್ರ ಸರ್ಕಾರ, ಗೂಗಲ್, ಯುಟ್ಯೂಬ್ ಮತ್ತು ಸೆನ್ಸಾರ್ ಮಂಡಳಿಗೆ ಸೂಚಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.