ADVERTISEMENT

ಅಕ್ರಮ ಬಂಧನದಲ್ಲಿರುವ ರೋಹಿಂಗ್ಯಾ ಸಮುದಾಯದವರ ಬಿಡುಗಡೆಗೆ ‘ಸುಪ್ರೀಂ’ಗೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 15:54 IST
Last Updated 11 ಮಾರ್ಚ್ 2021, 15:54 IST
ಜಮ್ಮುವಿನಲ್ಲಿ ನಿರಾಶ್ರಿತರ ಶಿಬಿರಗಳಿಗೆ ತೆರಳುತ್ತಿರುವ ರೋಹಿಂಗ್ಯಾ ಮುಸ್ಲಿಮರು (ಪಿಟಿಐ ಚಿತ್ರ)
ಜಮ್ಮುವಿನಲ್ಲಿ ನಿರಾಶ್ರಿತರ ಶಿಬಿರಗಳಿಗೆ ತೆರಳುತ್ತಿರುವ ರೋಹಿಂಗ್ಯಾ ಮುಸ್ಲಿಮರು (ಪಿಟಿಐ ಚಿತ್ರ)   

ನವದೆಹಲಿ: ಜಮ್ಮುವಿನಲ್ಲಿ ಅಕ್ರಮವಾಗಿ ಬಂಧಿಸಿಟ್ಟಿರುವ ಸುಮಾರು 150ರಿಂದ 170 ಮಂದಿ ರೋಹಿಂಗ್ಯಾ ಸಮುದಾಯದವರನ್ನು ಬಿಡುಗಡೆ ಮಾಡುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ರೋಹಿಂಗ್ಯಾ ಸಮುದಾಯದವರಿಗೆ ಆಶ್ರಯ ನೀಡಿದ್ದ ಮೊಹಮ್ಮದ್ ಸಲೀಮುಲ್ಲಾ ಪರವಾಗಿ ವಕೀಲ ಪ್ರಶಾಂತ್ ಭೂಷಣ್ ಅರ್ಜಿ ಸಲ್ಲಿಸಿದ್ದಾರೆ. ರಾಯಭಾರ ಕಚೇರಿಯ ಪರಿಶೀಲನೆಯ ನಂತರ ಈ ಜನರು ಮ್ಯಾನ್ಮಾರ್‌ಗೆ ಗಡೀಪಾರು ಆಗುವ ಶಿಕ್ಷೆಯನ್ನು ಎದುರಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಜಮ್ಮುವಿನಲ್ಲಿ ಮಾತ್ರವಲ್ಲದೆ ದೇಶದಾದ್ಯಂತದರೋಹಿಂಗ್ಯಾ ನಿರಾಶ್ರಿತರಿಗೆ ನಿರಾಶ್ರಿತರ ಕಾರ್ಡ್‌ ನೀಡಿ, ಶಿಬಿರಗಳಲ್ಲಿ ಆಶ್ರಯ ನೀಡಿ ರಕ್ಷಣೆ ಮಾಡುವಂತೆ ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್‌ ಕೂಡ (ಯುಎನ್‌ಎಚ್‌ಸಿಆರ್) ನಿರ್ದೇಶನ ನೀಡಿದ್ದಾರೆ ಎನ್ನುವುದನ್ನು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ರೋಹಿಂಗ್ಯಾ ನಿರಾಶ್ರಿತರ ಬಯೋಮೆಟ್ರಿಕ್ ಪರಿಶೀಲನೆಗೆಜಮ್ಮು ಮತ್ತು ಕಾಶ್ಮೀರ ಆಡಳಿತವು ಕೈಗೊಂಡ ಕ್ರಮದ ನಂತರವೂ ಕೆಲವು ರೋಹಿಂಗ್ಯಾಗಳು ನಿರಾಶ್ರಿತರ ಶಿಬಿರಗಳಿಗೆ ಹಿಂತಿರುಗಲಿಲ್ಲ. ಹಾಗಾಗಿ ಅವರನ್ನು ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದಾರೆ ಎನ್ನುವ ಗೊಂದಲದ ಮಾಹಿತಿ ರೋಹಿಂಗ್ಯಾ ಕುಟುಂಬಗಳಿಂದ ಬಂದಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಜಮ್ಮುವಿನಲ್ಲಿ ರೋಹಿಂಗ್ಯಾ ನಿರಾಶ್ರಿತರ ಪರಿಸ್ಥಿತಿ ಅನಿಶ್ಚಿತವಾಗಿದೆ. ಅವರಿಗೆ ನೀಡಲಾದ ಯುಎನ್‌ಎಚ್‌ಸಿಆರ್ ನಿರಾಶ್ರಿತರ ಕಾರ್ಡ್‌ಗಳು ಸರಿಯಾಗಿಲ್ಲ ಎಂದು ಸರ್ಕಾರವೂ ಪದೇ ಪದೇ ಹೇಳುತ್ತಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.