ADVERTISEMENT

ಸರ್ಕಾರದಿಂದ ವಿವರಣೆ ಕೋರಿದ ಹೈಕೋರ್ಟ್‌

ಬಾಲಕಿಗೆ ಭಾರತದ ಪಾಸ್‌ಪೋರ್ಟ್‌ ನಿರಾಕರಣ

ಪಿಟಿಐ
Published 29 ಅಕ್ಟೋಬರ್ 2019, 19:30 IST
Last Updated 29 ಅಕ್ಟೋಬರ್ 2019, 19:30 IST
MEA reverses its decisions; no orange colour passport
MEA reverses its decisions; no orange colour passport   

ನವದೆಹಲಿ : ತಂದೆ ಬ್ರಿಟನ್‌ ಪೌರತ್ವ ಹೊಂದಿದ್ದಾರೆ ಎಂಬ ಕಾರಣಕ್ಕೆ ಬಾಲಕಿಗೆ ಭಾರತದ ಪಾಸ್‌ಪೋರ್ಟ್‌ ನಿರಾಕರಿಸಿದ್ದ ಪ್ರಕರಣ ಸಂಬಂಧ ವಿವರಣೆ ನೀಡುವಂತೆ ದೆಹಲಿ ಹೈಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ಎನ್‌.ಪಟೇಲ್‌ ಮತ್ತು ನ್ಯಾಯಮೂರ್ತಿ ಸಿ.ಹರಿಶಂಕರ್‌ ಅವರನ್ನು ಒಳಗೊಂಡ ಪೀಠ, ಗೃಹ ವ್ಯವಹಾರ, ವಿದೇಶಾಂಗ ಮತ್ತು ಕಾನೂನು ಸಚಿವಾಲಯಕ್ಕೆ ನೋಟಿಸ್‌ ಜಾರಿ ಮಾಡಿದ್ದು, ಫೆ.20 ರಂದು ಸರ್ಕಾರ ಕೈಗೊಂಡ ನಿರ್ಧಾರದ ಬಗ್ಗೆ ವಿವರ ನೀಡುವಂತೆ ತಿಳಿಸಿದೆ. ಬಾಲಕಿಯ ಪಾಸ್‌ಪೋರ್ಟ್‌ 2017 ರಲ್ಲಿ ಅವಧಿ ಮುಗಿದಿದ್ದು, ನವೀಕರಣಕ್ಕಾಗಿ ಅರ್ಜಿ ಸಲ್ಲಿಸಲಾಗಿತ್ತು.

ಪೌರತ್ವ ಕಾಯಿದೆಯ ಸೆಕ್ಷನ್‌ 8(2) ರ ಅಡಿ ಬಾಲಕಿ ಭಾರತೀಯ ಪ್ರಜೆ ಅಲ್ಲ ಎಂಬ ಸರ್ಕಾರದ ವಾದವನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.

ADVERTISEMENT

‘ಪಾಸ್‌ಪೋರ್ಟ್‌ ನವೀಕರಣಕ್ಕಾಗಿ ಬಾಲಕಿ ಸಲ್ಲಿಸಲಾಗಿರುವ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಈಕೆಯ ತಾಯಿ 2010ರಲ್ಲೇ ಮೃತಪಟ್ಟಿದ್ದಾರೆ. ತಂದೆ ಬ್ರಿಟನ್‌ನಲ್ಲಿ ವೈದ್ಯಕೀಯ ವೃತ್ತಿಯಲ್ಲಿದ್ದಾರೆ. ಅವರು 2017 ರಲ್ಲಿ ಅಲ್ಲಿನ ಪೌರತ್ವ ಪಡೆದುಕೊಂಡಿದ್ದಾರೆ. ಆದ್ದರಿಂದ ಬಾಲಕಿ ಭಾರತದ ಪ್ರಜೆ ಅಲ್ಲ’ ಎಂದು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ಸರ್ಕಾರದ ಪರ ವಕೀಲ ಮನೀಶ್‌ ಮೋಹನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.