ADVERTISEMENT

ಭುವನ ಸುಂದರಿ ಹರ್ನಾಜ್‌ ಸಂಧುಗೆ ಶುಭ ಹಾರೈಸಿದ ಪ್ರಧಾನಿ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಡಿಸೆಂಬರ್ 2021, 17:36 IST
Last Updated 13 ಡಿಸೆಂಬರ್ 2021, 17:36 IST
ನರೇಂದ್ರ ಮೋದಿ ಮತ್ತು ಹರ್ನಾಜ್
ನರೇಂದ್ರ ಮೋದಿ ಮತ್ತು ಹರ್ನಾಜ್   

ನವದೆಹಲಿ: 2021ರ ಭುವನ ಸುಂದರಿ ಕಿರೀಟ ತೊಟ್ಟ ಚಂಡೀಗಢದ 21 ವರ್ಷದ ಹರ್ನಾಜ್ ಸಂಧು ಅವರನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಭಿನಂದಿಸಿದ್ದಾರೆ.

' ಭುವನ ಸುಂದರಿ ಕಿರೀಟವನ್ನು ಅಲಂಕರಿಸಿದ್ದಕ್ಕಾಗಿ ಹರ್ನಾಜ್ ಸಂಧು ಅವರಿಗೆ ಅಭಿನಂದನೆಗಳು. ಅವರ ಮುಂದಿನ ಪ್ರಯತ್ನಗಳಿಗೆ ಶುಭವಾಗಲಿ‘ ಎಂದು ಪ್ರಧಾನಿ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಸುಶ್ಮಿತಾ ಸೇನ್ ಮತ್ತು ಲಾರಾ ದತ್ತಾ ನಂತರ ಭುವನ ಸುಂದರಿ ಕಿರೀಟವನ್ನು ಪಡೆದ ಮೂರನೇ ಭಾರತೀಯರೆಂಬ ಹೆಗ್ಗಳಿಕೆಗೆ ಸಂಧು ಪಾತ್ರರಾಗಿದ್ದಾರೆ.

ADVERTISEMENT

21 ವರ್ಷಗಳ ಬಳಿಕ ಭಾರತದಿಂದ ಆಯ್ಕೆಯಾದ ಮೊದಲ ಭುವನ ಸುಂದರಿ ಹರ್ನಾಜ್‌ ಸಂಧು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.