ADVERTISEMENT

ಹಾಲು ಉತ್ಪಾದನೆಯಲ್ಲಿ ದಾಖಲೆ ಸಾಧನೆ: ಮೋದಿ ಶ್ಲಾಘನೆ

ಪಿಟಿಐ
Published 28 ನವೆಂಬರ್ 2022, 11:14 IST
Last Updated 28 ನವೆಂಬರ್ 2022, 11:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ (ಪಿಟಿಐ): ಕಳೆದ ಎಂಟು ವರ್ಷಗಳಲ್ಲಿ ಭಾರತದಲ್ಲಿ ಆಗಿರುವ ಹಾಲು ಉತ್ಪಾದನೆ ಕುರಿತು ಸಂಸತ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ‘ನಾರಿ ಶಕ್ತಿಯನ್ನು ಮತ್ತಷ್ಟು ಬಲಗೊಳಿಸಲು ಹೈನುಗಾರಿಕೆ ಕ್ಷೇತ್ರವು ಮುಖ್ಯ ಪಾತ್ರವಹಿಸುತ್ತದೆ’ ಎಂದು ಅಭಿಪ್ರಾಯಪಟ್ಟರು.

ಹಾಲು ಉತ್ಪಾದನೆಯಲ್ಲಿಕಳೆದ ಎಂಟು ವರ್ಷಗಳಲ್ಲಿ ‘ಅಭೂತಪೂರ್ವ ಬೆಳವಣಿಗೆ’ ಆಗಿದೆ ಎಂದು ಕೇಂದ್ರ ಮೀನುಗಾರಿಕೆ, ಪ್ರಾಣಿ ಸಾಕಾಣಿಕೆ ಮತ್ತು ಹೈನುಗಾರಿಕೆ ಸಚಿವ ಪುರುಶೋತ್ತಮ್‌ ರುಪಾಲಾ ಅವರು ಮಾಡಿದ ಟ್ವೀಟ್‌ಗೆ ಪ್ರಧಾನಿ ಮೋದಿ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಅವಧಿಯಲ್ಲಿ ಕೇವಲ ಎಂಟು ವರ್ಷಗಳಲ್ಲಿ 8.3 ಕೋಟಿ ಟನ್‌ನಷ್ಟು ಹಾಲು ಉತ್ಪಾದನೆ ಹೆಚ್ಚಳವಾಗಿದೆ. ಆದರೆ, ಕಳೆದ 63 ವರ್ಷಗಳಲ್ಲಿ ಕೇವಲ 12.1ಕೋಟಿ ಟನ್‌ನಷ್ಟು ಮಾತ್ರ ಹೆಚ್ಚಳವಾಗಿತ್ತು’ ಎಂದು ಸಚಿವ ಟ್ವೀಟ್‌ ಮಾಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.