ADVERTISEMENT

ಮತದಾನದಲ್ಲಿ ಪಾಲ್ಗೊಳ್ಳಿ: ಯುವ ಸಮೂಹಕ್ಕೆ ಪ್ರಧಾನಿ ಮೋದಿ ಮನವಿ

ಪಿಟಿಐ
Published 25 ಫೆಬ್ರುವರಿ 2024, 14:44 IST
Last Updated 25 ಫೆಬ್ರುವರಿ 2024, 14:44 IST
<div class="paragraphs"><p> ಪ್ರಧಾನಿ ನರೇಂದ್ರ ಮೋದಿ</p></div>

ಪ್ರಧಾನಿ ನರೇಂದ್ರ ಮೋದಿ

   

ನವದೆಹಲಿ: ಮೊದಲ ಬಾರಿಯ ಮತದಾರರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಯುವ ಸಮೂಹಕ್ಕೆ ಭಾನುವಾರ ಮನವಿ ಮಾಡಿಕೊಂಡರು.

‘ಮನದ ಮಾತು’ ರೇಡಿಯೊ ಕಾರ್ಯಕ್ರಮದ 110ನೇ ಸಂಚಿಕೆಯಲ್ಲಿ ಮಾತನಾಡಿದ ಅವರು, ‘18ನೇ ಲೋಕಸಭಾ ಚುನಾವಣೆಯು ಯುವ ಜನರ ಆಶೋತ್ತರಗಳ ಪ್ರತೀಕ ಎನಿಸಿದೆ. ನಿಮ್ಮ ಮೊದಲ ಮತ ಈ ದೇಶಕ್ಕಾಗಿ ಆಗಬೇಕು ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡಿ’ ಎಂದು ಕರೆ ನೀಡಿದರು. 

ADVERTISEMENT

ಯುವ ಜನರು ತಮ್ಮನ್ನು ಮತದಾನ ಪ್ರಕ್ರಿಯೆಗೆ ಮಾತ್ರ ಸೀಮಿತಗೊಳಿಸದೆ, ಚುನಾವಣಾ ಚಟುವಟಿಕೆಗೆ ಸಂಬಂಧಿಸಿದ ಸಂವಾದ ಮತ್ತು ಚರ್ಚೆಗಳ ಬಗ್ಗೆಯೂ ಅರಿವು ಹೊಂದಬೇಕು ಎಂದು ಸಲಹೆ ನೀಡಿದರು.

ಚುನಾವಣೆಯ ನೀತಿ ಸಂಹಿತೆ ಜಾರಿಯಾಗಲಿರುವ ಕಾರಣ ಮುಂದಿನ ಮೂರು ತಿಂಗಳು ‘ಮನದ ಮಾತು’ ಪ್ರಸಾರವಾಗುವುದಿಲ್ಲ ಎಂದು ಮೋದಿ ಇದೇ ಸಂದರ್ಭದಲ್ಲಿ ಹೇಳಿದರು.

‘ಈ ಕಾರ್ಯಕ್ರಮದ 110 ಸಂಚಿಕೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಮುಂದಿನ ಬಾರಿ ನಾವು 111ನೇ ಸಂಚಿಕೆಯಲ್ಲಿ ಭೇಟಿಯಾಗೋಣ’ ಎನ್ನುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೇರುವ ವಿಶ್ವಾಸ ವ್ಯಕ್ತಪಡಿಸಿದರು. 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ಈ ಕಾರ್ಯಕ್ರಮ ಕೆಲವು ತಿಂಗಳು ಮೊಟಕುಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.