ADVERTISEMENT

ನೆಹರು, ರಾಜೀವ್ ಗಾಂಧಿಯಂತೆ ಮೋದಿ ಬಹು ವರ್ಚಸ್ಸಿನ ನಾಯಕ: ರಜನೀಕಾಂತ್ 

ಏಜೆನ್ಸೀಸ್
Published 29 ಮೇ 2019, 7:43 IST
Last Updated 29 ಮೇ 2019, 7:43 IST
   

ಚೆನ್ನೈ:ಲೋಕಸಭಾ ಚುನಾವಣೆಯಲ್ಲಿ ಭಾರಿ ಗೆಲುವು ಸಾಧಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮಿಳು ಸಿನಿಮಾ ತಾರೆ ಮತ್ತು ರಾಜಕಾರಣಿ ರಜನಿಕಾಂತ್‌ ಹೊಗಳಿದ್ದಾರೆ.

ಜವಾಹರಲಾಲ್‌ ನೆಹರೂ, ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಮತ್ತು ಅಟಲ್‌ ಬಿಹಾರಿ ವಾಜಪೇಯಿ ಅವರಂತಹ ‘ಜನಾಕರ್ಷಕ ನಾಯಕರ’ ಸಾಲಿಗೆ ಈಗ ಮೋದಿ ಅವರೂ ಸೇರಿದ್ದಾರೆ ಎಂದು ರಜನಿಕಾಂತ್‌ ಹೇಳಿದ್ದಾರೆ.

ತಮಿಳುನಾಡಿನ ಫಲಿತಾಂಶವನ್ನು ವಿಶ್ಲೇಷಿಸಿದ ಅವರು, ‘ಇಡೀ ದೇಶದಲ್ಲಿ ಮೋದಿಪರ ಅಲೆ ಇದ್ದರೆ ತಮಿಳುನಾಡಿನಲ್ಲಿ ಮೋದಿ ವಿರೋಧಿ ಅಲೆ ಇತ್ತು. ಈ ಅಲೆಯ ಜತೆಗೆ ಇದ್ದವರೆಲ್ಲ ಗೆದ್ದಿದ್ದಾರೆ’ ಎಂದು ಹೇಳಿದ್ದಾರೆ.

ADVERTISEMENT

ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ರಾಜೀನಾಮೆ ನೀಡುವುದು ಅನಗತ್ಯ. ಕಾಂಗ್ರೆಸ್‌ ಪಕ್ಷದ ಚುನಾವಣಾ ಪ್ರಚಾರದಲ್ಲಿ ಎರಡನೇ ಹಂತದ ನಾಯಕರು ಸಹಕರಿಸಲಿಲ್ಲ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ತಮಿಳುನಾಡು ವಿಧಾನಸಭೆಗೆ 2021ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವರು ತಮ್ಮ ಪಕ್ಷವನ್ನು ಸಜ್ಜುಗೊಳಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.