ADVERTISEMENT

ಮೋಧೆರಾ ಮೊದಲ 24x7 ಸೌರಶಕ್ತಿ ಚಾಲಿತ ಗ್ರಾಮ: ಪ್ರಧಾನಿ ನರೇಂದ್ರ ಮೋದಿ ಘೋಷಣೆ

ಪ್ರಧಾನಿ ನರೇಂದ್ರ ಮೋದಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2022, 14:46 IST
Last Updated 9 ಅಕ್ಟೋಬರ್ 2022, 14:46 IST
ಗುಜರಾತ್‌ನ ಮೆಹಸಾಣ ಜಿಲ್ಲೆಯ ಮೋಧೆರಾದಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮೊದಲ 24x7 ಸೌರಶಕ್ತಿ ಚಾಲಿತ ಗ್ರಾಮ ಘೋಷಣೆಯ ಜತೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಿ.ಆರ್‌. ಪಾಟೀಲ್‌ ಇದ್ದರು – ಪಿಟಿಐ ಚಿತ್ರ
ಗುಜರಾತ್‌ನ ಮೆಹಸಾಣ ಜಿಲ್ಲೆಯ ಮೋಧೆರಾದಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮೊದಲ 24x7 ಸೌರಶಕ್ತಿ ಚಾಲಿತ ಗ್ರಾಮ ಘೋಷಣೆಯ ಜತೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಿ.ಆರ್‌. ಪಾಟೀಲ್‌ ಇದ್ದರು – ಪಿಟಿಐ ಚಿತ್ರ   

ಮೋಧೆರಾ (ಗುಜರಾತ್‌):ಮೆಹಸಾಣ ಜಿಲ್ಲೆಯ ಮೋಧೆರಾವನ್ನು ದೇಶದ ಮೊದಲ 24x7ಸೌರಶಕ್ತಿಚಾಲಿತ ಗ್ರಾಮವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಘೋಷಿಸಿದರು.

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಮೋದಿ ಅವರು ರಾಜ್ಯದಲ್ಲಿ ಮೂರು ದಿನಗಳ ಪ್ರವಾಸ ಕೈಗೊಂಡಿದ್ದು,24x7 ಸೌರಶಕ್ತಿ ಚಾಲಿತ ಗ್ರಾಮ ಘೋಷಣೆ ಸಮಾರಂಭದಲ್ಲಿ ಪಾಲ್ಗೊಂಡರು.

ನಂತರ ನಡೆದ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಮೋಧೆರಾ ಸೂರ್ಯ ದೇವಾಲಯಕ್ಕೆ ಹೆಸರುವಾಸಿ. ಈಗ ಇದು ಸೌರಶಕ್ತಿ ಚಾಲಿತ ಗ್ರಾಮವಾಗಿಯೂ ಹೆಸರು ಪಡೆಯಿತು ಎಂದರು.

ADVERTISEMENT

ದೇಶದ ಮೊದಲ ಸೌರಶಕ್ತಿ ಚಾಲಿತ ಹಳ್ಳಿ ಎಂಬ ಶ್ರೇಯ ಪಡೆದ ಮೋಧೆರಾದಲ್ಲಿ ದಿನದ 24 ತಾಸೂ ಸೌರ ವಿದ್ಯುತ್‌ ದೊರೆಯಲಿದೆ. ಗ್ರಾಮದಲ್ಲಿ ಸೌರ ವಿದ್ಯುತ್ ಸ್ಥಾವರ ಅಭಿವೃದ್ಧಿಪಡಿಸಲಾಗಿದೆ. ವಸತಿ ಕಟ್ಟಡಗಳು, ಸರ್ಕಾರಿ ಕಟ್ಟಡಗಳ ಮೇಲ್ಚಾವಣಿಯಲ್ಲಿ 1,300ಕ್ಕೂ ಹೆಚ್ಚು ಸೌರಫಲಕಗಳನ್ನು ಅಳವಡಿಸಲಾಗಿದೆ ಎಂದು ಸರ್ಕಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

‘ಗುಜರಾತ್‌ ಜನತೆ ಜಾತಿ ನೋಡದೆ ಗೆಲ್ಲಿಸಿದರು’

‘ಗುಜರಾತ್‌ನ ಜನತೆ ನನ್ನ ಜಾತಿ, ರಾಜಕೀಯ ಹಿನ್ನೆಲೆ ನೋಡದೆ ಚುನಾವಣೆಯಲ್ಲಿ ಗೆಲ್ಲಿಸಿದರು’ ಎಂದು ನರೇಂದ್ರ ಮೋದಿ ಹೇಳಿದರು.

ಕಳೆದೆರಡು ದಶಕಗಳಿಂದ ರಾಜ್ಯದ ಜನರು ನನ್ನ ಜಾತಿಯನ್ನು ಲೆಕ್ಕಿಸದೆ ಆಶೀರ್ವದಿಸಿದ್ದಾರೆ ಎಂದರು.

ಮೋದಿ ಅವರು ರಾಜ್ಯದಲ್ಲಿ ಇದೇ ವೇಳೆ ₹14,600 ಕೋಟಿಗೂ ಹೆಚ್ಚು ಮೊತ್ತದ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಪ್ರಧಾನಿ ಹುದ್ದೆಗೇರುವ ಮೊದಲು ಮೋದಿ ಅವರು 2001ರಿಂದ 2014ರವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಮುಂಬರುವ ಗುಜರಾತ್ ವಿಧಾನಸಭೆ ಚುನಾವಣೆ ಆಡಳಿತರೂಢ ಬಿಜೆಪಿ ಪಾಲಿಗೆ ನಿರ್ಣಾಯಕವೆನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.