ADVERTISEMENT

‘125 ಕೋಟಿ ಭಾರತೀಯರ ಮೇಲೆ ಪ್ರಧಾನಿಯಿಂದ ನಿರ್ದಿಷ್ಟ ದಾಳಿ’

Mevani

ಪಿಟಿಐ
Published 3 ಜುಲೈ 2018, 20:14 IST
Last Updated 3 ಜುಲೈ 2018, 20:14 IST
ಜಿಗ್ನೇಶ್‌ ಮೇವಾನಿ
ಜಿಗ್ನೇಶ್‌ ಮೇವಾನಿ   

ಅಹ್ಮದಾಬಾದ್: ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ಹಾಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ತರುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ 125 ಕೋಟಿ ಜನರ ಮೇಲೆ ‘ಸಾವು ಉಂಟುಮಾಡಬಹುದಾದನಿರ್ದಿಷ್ಟ ದಾಳಿ’ ನಡೆಸಿದ್ದಾರೆ ಎಂದು ಗುಜರಾತ್ ಶಾಸಕ ಜಿಗ್ನೇಶ್ ಮೆವಾನಿ ಆರೋಪಿಸಿದ್ದಾರೆ.

2016 ಸೆಪ್ಟೆಂಬರ್‌ನಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನಾಪಡೆ ನಡೆಸಿದ ನಿರ್ದಿಷ್ಟ ದಾಳಿಯ ದೃಶ್ಯಾವಳಿಗಳನ್ನು ಟಿವಿ ಚಾನಲ್‌ಗಳು ಈಚೆಗೆ ಪ್ರಸಾರ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಜಿಗ್ನೇಶ್ ಆರೋಪ ಮಾಡಿದ್ದಾರೆ.

ಸೇನೆ ನಡೆಸಿದ ನಿರ್ದಿಷ್ಟ ದಾಳಿಗಿಂತ ಇದು ದೊಡ್ಡ ದಾಳಿ ಎಂದಿರುವ ಅವರು ‘ಕೃಷಿಕರ ಆದಾಯ ದುಪ್ಪಟ್ಟುಗೊಳಿಸುವುದಾಗಿ, ಎರಡು ಕೋಟಿ ಜನರಿಗೆ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಅದನ್ನು ಜಾರಿಗೆ ತರದೆ ಜನರ ಮೇಲೆ ಹಾಗೂ ಮಜಿಥಿಯಾ ಆಯೋಗದ ಶಿಫಾರಸುಗಳು ಜಾರಿಗೊಳಿಸದೆ ಮಾಧ್ಯಮದ ಮೇಲೆ ಅವರು ನಿರ್ದಿಷ್ಟ ದಾಳಿ ನಡೆಸಿದ್ದಾರೆ’ ಎಂದು ಆರೋಪಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.