ADVERTISEMENT

ಅಪ್ಘಾನ್‌ನಲ್ಲಿ ಹೆಚ್ಚಿದ ಹಿಂಸಾಚಾರ: ಪ್ರಧಾನಿ ಮೋದಿ ಕಳವಳ

ಯುದ್ಧ ಕೊನೆಗಾಣಿಸಲು ಕರೆ, ಅಭಿವೃದ್ಧಿಗೆ ನೆರವು ನೀಡುವ ಭರವಸೆ

ಪಿಟಿಐ
Published 9 ಫೆಬ್ರುವರಿ 2021, 10:58 IST
Last Updated 9 ಫೆಬ್ರುವರಿ 2021, 10:58 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ನೆರೆಯ ರಾಷ್ಟ್ರ ಅಫ್ಗಾನಿಸ್ತಾನದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ, ಯುದ್ಧವನ್ನು ಕೊನೆಗೊಳಿಸಲು ದೀರ್ಘಕಾಲದ ಕದನವಿರಾಮಕ್ಕೆ ಕರೆ ನೀಡುವ ಜತೆಗೆ, ಅಪ್ಘಾನ್‌ ರಾಷ್ಟ್ರದ ಅಭಿವೃದ್ಧಿಗೆ ಭಾರತ ಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ಕಾಬೂಲ್ ನದಿ ಜಲಾನಯನ ಪ್ರದೇಶದಲ್ಲಿ ಭಾರತ ಅಣೆಕಟ್ಟು ನಿರ್ಮಿಸುವ ಒಪ್ಪಂದವನ್ನು ಅಂತಿಮಗೊಳಿಸುವುದಕ್ಕಗಿ ಮಂಗಳವಾರ ಅಫ್ಗಾನ್‌ ಅಧ್ಯಕ್ಷ ಅಶ್ರಫ್ ಘನಿ ಅವರೊಂದಿಗೆ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಮೋದಿ, ‘ನಿಕಟ ನೆರೆಹೊರೆಯವರಾಗಿದ್ದು ಮತ್ತು ಬಲವಾದ ಕಾರ್ಯತಂತ್ರ ಪಾಲುದಾರ ರಾಷ್ಟ್ರಗಳಾಗಿರುವ ಭಾರತ ಮತ್ತು ಅಫ್ಗಾನಿಸ್ತಾ, ಉಗ್ರವಾದ ಮತ್ತು ಭಯೋತ್ಪಾದನೆ ಮುಕ್ತ ವಲಯವನ್ನು ನೋಡಲು ಬಯಸುತ್ತವೆ‘ ಎಂದು ಹೇಳಿದರು.

‘ಅಫ್ಗಾನಿಸ್ತಾನದ ಅಭಿವೃದ್ಧಿಯ ಪಯಣವನ್ನು ಯಾವುದೇ ಹೊರಗಿನ ಶಕ್ತಿಗಳು ತಡೆಯಲು ಸಾಧ್ಯವಿಲ್ಲ. ಹಾಗೆಯೇ, ಭಾರತದೊಂದಿಗಿನ ಸ್ನೇಹವನ್ನು ತಪ್ಪಿಸಲು ಸಾಧ್ಯವಿಲ್ಲ‘ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ಅಫ್ಗಾನಿಸ್ತಾನದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ನಮಗೆ ಕಾಳಜಿ ಇದೆ. ದೇಶದಲ್ಲಿ ಪೂರ್ಣ ಕದನ ವಿರಾಮವನ್ನು ನಾವು ಬೆಂಬಲಿಸುತ್ತೇವೆ‘ ಎಂದು ಪ್ರಧಾನಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.