ADVERTISEMENT

ದಟ್ಟ ಮಂಜು:ಪ್ರಧಾನಿ ಮೋದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಡಿಂಗ್‌ಗೆ ಅಡಚಣೆ

ಪಿಟಿಐ
Published 20 ಡಿಸೆಂಬರ್ 2025, 7:42 IST
Last Updated 20 ಡಿಸೆಂಬರ್ 2025, 7:42 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೋಲ್ಕತ್ತ: ಶನಿವಾರ ಪಶ್ಚಿಮ ಬಂಗಾಳದ ತಾಹೆರ್‌ಪುರ ಹೆಲಿಪ್ಯಾಡ್‌ನಲ್ಲಿ ದಟ್ಟವಾದ ಮಂಜು ಕವಿದಿದ್ದರಿಂದ ಕಡಿಮೆ ಗೋಚರತೆಯಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರ ಹೆಲಿಕಾಪ್ಟರ್ ಇಳಿಯಲು ವಿಫಲವಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೆಲಿಪ್ಯಾಡ್ ಇದ್ದ ಮೈದಾನದ ಮೇಲೆ ಸ್ವಲ್ಪ ಹೊತ್ತು ಹಾರಾಡುತ್ತಿದ್ದ ಪ್ರಧಾನಿಯವರ ಹೆಲಿಕಾಪ್ಟರ್ ಬಳಿಕ ಯೂ-ಟರ್ನ್ ಮಾಡಿ ಕೋಲ್ಕತ್ತ ವಿಮಾನ ನಿಲ್ದಾಣಕ್ಕೆ ಮರಳಿತು ಎಂದು ಅವರು ಹೇಳಿದ್ದಾರೆ.

ADVERTISEMENT

ಹವಾಮಾನ ಪರಿಸ್ಥಿತಿ ಸುಧಾರಣೆಗಾಗಿ ಪ್ರಧಾನಿ ವಿಮಾನ ನಿಲ್ದಾಣದಲ್ಲೇ ಕಾಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಮೋದಿ ಅವರು ರಸ್ತೆ ಮೂಲಕ ರ್‍ಯಾಲಿ ನಡೆಯುವ ಜಿಲ್ಲೆಯನ್ನು ತಲುಪುತ್ತಾರೋ ಅಥವಾ ಹವಾಮಾನ ಸುಧಾರಿಸಿದ ಬಳಿಕ ವೈಮಾನಿಕ ಮಾರ್ಗದ ಮೂಲಕ ತಾಹೆರ್‌ಪುರ ತಲುಪಲು ಮತ್ತೊಂದು ಪ್ರಯತ್ನ ಮಾಡುತ್ತಾರೋ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.

ಇದಕ್ಕೂ ಮುನ್ನ, ಪ್ರಧಾನಿ ಬೆಳಿಗ್ಗೆ 10.40ರ ಸುಮಾರಿಗೆ ಕೋಲ್ಕತ್ತ ತಲುಪಿದ್ದರು. ನಾದಿಯಾ ಜಿಲ್ಲೆಯ ತಾಹೆರ್‌ಪುರಕ್ಕೆ ಹೆಲಿಕಾಪ್ಟರ್‌ನಲ್ಲಿ ತೆರಳಿದ್ದರು. ಅಲ್ಲಿ ಅವರು ಪಶ್ಚಿಮ ಬಂಗಾಳದ ಹೆದ್ದಾರಿ ಯೋಜನೆಗಳಿಗೆ ಆಡಳಿತಾತ್ಮಕ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಬಳಿಕ, ಪರಿವರ್ತನ್ ಸಂಕಲ್ಪ ಸಭಾ ಎಂಬ ಬಿಜೆಪಿಯ ರಾಜಕೀಯ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಬೇಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.