ADVERTISEMENT

ಪ್ರಧಾನಿ ಮೋದಿಗೆ ಮಾಲ್ಡೀವ್ಸ್ ಅತ್ಯುನ್ನತ ಪದವಿ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 13:46 IST
Last Updated 8 ಜೂನ್ 2019, 13:46 IST
   

ಮಾಲ್ಡೀವ್ಸ್:ಮಾಲ್ಡೀವ್ಸ್ ರಾಷ್ಟ್ರ ವಿದೇಶಿಯರ ಅತ್ಯುನ್ನತ ಸೇವೆಗಾಗಿ ನೀಡುವಪುರಸ್ಕಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿ ಗೌರವಿಸಿದೆ.

ಶನಿವಾರ ಮೋದಿ ಅವರು ಮಾಲ್ಡೀವ್ಸ್‌‌ಗೆಭೇಟಿ ನೀಡಿದ್ದು, ಅಧ್ಯಕ್ಷ ಇಬ್ರಾಹಿಂ ಮಹಮದ್ ಸೊಲಿ ಪದಕ ಹಾಕಿ ವಸ್ತ್ರದ ಮಾಲೆ ಹಾಕುವ ಮೂಲಕ ವಿದೇಶಿ ಗಣ್ಯರಅತ್ಯುನ್ನತ ಸೇವೆಗಾಗಿ ನೀಡುವ ‘ನಿಶಾನ್ ಇಜುದ್ದೀನ್‌’ ಪುರಸ್ಕಾರ ನೀಡಿ ಗೌರವಿಸಿದರು. ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರಿಗೆ ಹೆಣ್ಣು ಮಕ್ಕಳು ನರ್ತಿಸುವ ಮೂಲಕ ಸಾಂಪ್ರದಾಯಿಕ ಸ್ವಾಗತ ಕೋರಿದರು.

ಈ ಪುರಸ್ಕಾರವನ್ನು ಅತ್ಯುನ್ನತ ಸೇವೆ ಸಲ್ಲಿಸಿರುವ ವಿದೇಶೀ ಗಣ್ಯರಿಗೆ ಮಾಲ್ಡೀವ್ಸ್ ಸರ್ಕಾರ ನೀಡಿ ಗೌರವಿಸುತ್ತದೆ. ಈ ಬಾರಿ ಮೋದಿ ಅವರಿಗೆ ನೀಡಿ ಗೌರವಿಸಿದೆ. ಮೋದಿ ಅವರು ಇಲ್ಲಿನ ಸಂಸತ್ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ADVERTISEMENT

ಬೆಳಗ್ಗೆಯೇ ಮಾಲ್ಡೀವ್ಸ್‌ ಸರ್ಕಾರದ ಈ ತೀರ್ಮಾನವನ್ನು ಅಧ್ಯಕ್ಷ ಇಬ್ರಾಹಿಂ ಪ್ರಕಟಿಸಿದ್ದರು. ಎರಡನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ಮೋದಿಭೇಟಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.