ಭೂತಾನ್ ದೊರೆ ಜಿಗ್ಮೆ ಖೇಸರ್ ನಾಂಗೇಲ್ ವಾಂಗ್‌ಚುಕ್, ಪ್ರಧಾನಿ ನರೇಂದ್ರ ಮೋದಿ
ಸಂಗ್ರಹ ಚಿತ್ರ– ಪಿಟಿಐ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಪ್ರವಾಸಕ್ಕೆ ನೆರೆಯ ಭೂತಾನ್ ದೇಶಕ್ಕೆ ಇಂದು ನವದೆಹಲಿಯಿಂದ ತೆರಳಿದರು.
ಶನಿವಾರ ಅವರು ಭಾರತಕ್ಕೆ ವಾಪಸ್ ಆಗಲಿದ್ದಾರೆ.
ಭಾರತ ಸರ್ಕಾರ ಅನುಷ್ಠಾನಗೊಳಿಸುತ್ತಿರುವ ‘ನೆರೆಹೊರೆಯವರು ಮೊದಲು ನೀತಿ’ಯ ಭಾಗವಾಗಿ ಪ್ರಧಾನಿಯವರು ಈ ಪ್ರವಾಸ ಕೈಗೊಂಡಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಪ್ರಧಾನಿ ಗುರುವಾರವೇ ಭೂತಾನ್‌ಗೆ ತೆರಳಬೇಕಿತ್ತು. ಆದರೆ, ಹವಾಮಾನ ವೈಪರೀತ್ಯ ಕಾರಣಗಳಿಂದ ಮುಂದೂಡಿಕೆ ಆಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.