ADVERTISEMENT

ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಗಾಯಕ ದಿಲ್ಜಿತ್ ದೋಸಂಜ್

ಪಿಟಿಐ
Published 2 ಜನವರಿ 2025, 2:20 IST
Last Updated 2 ಜನವರಿ 2025, 2:20 IST
<div class="paragraphs"><p>ಗಾಯಕ&nbsp;ದಿಲ್ಜಿತ್ ದೋಸಂಜ್ ಮತ್ತು ಪ್ರಧಾನಿ ಮೋದಿ</p></div>

ಗಾಯಕ ದಿಲ್ಜಿತ್ ದೋಸಂಜ್ ಮತ್ತು ಪ್ರಧಾನಿ ಮೋದಿ

   

ಚಿತ್ರ ಕೃಪೆ: ಎಕ್ಸ್‌

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಂಜಾಬ್‌ನ ಸೂಪರ್ ಸ್ಟಾರ್, ಗಾಯಕ ದಿಲ್ಜಿತ್ ದೋಸಂಜ್ ಅವರು ಬುಧವಾರ ಭೇಟಿಯಾಗಿದ್ದಾರೆ.

ADVERTISEMENT

ದಿಲ್ಜಿತ್‌ ಅವರೊಂದಿಗಿನ ಸಂವಾದದ ವಿಡಿಯೊ ತುಣುಕನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ.

‘ದಿಲ್ಜಿತ್‌ ದೋಸಂಜ್‌ ಅವರೊಂದಿಗೆ ಉತ್ತಮ ಸಂವಾದ ನಡೆಸಲಾಯಿತು. ಅವರು ನಿಜವಾಗಿಯೂ ಬಹುಮುಖಿಯಾಗಿದ್ದಾರೆ. ಪ್ರತಿಭೆ ಮತ್ತು ಸಂಪ್ರದಾಯವನ್ನು ಸಂಯೋಜಿಸಿದ್ದಾರೆ. ಸಾಧಾರಣ ಆರಂಭದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸುವಲ್ಲಿನ ಅವರ ಶ್ರಮ ಮತ್ತು ಬೆಳವಣಿಗೆ ಶ್ಲಾಘನೀಯ’ ಎಂದು ಪ್ರಧಾನಿ ಮೋದಿ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪ್ರಧಾನಿ ಮೋದಿ ಅವರೊಂದಿಗಿನ ಭೇಟಿ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ದೋಸಂಜ್‌, ‘2025ಕ್ಕೆ ಅದ್ಭುತ ಆರಂಭ. ಪ್ರಧಾನಿ ಮೋದಿ ಅವರ ಭೇಟಿ ಅತ್ಯಂತ ಸ್ಮರಣೀಯವಾಗಿದೆ. ಸಂಗೀತ ಸೇರಿದಂತೆ ಹಲವು ವಿಷಯಗಳ ಕುರಿತು ನಾವು ಸಂವಾದ ನಡೆಸಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.