ADVERTISEMENT

ಮೋದಿ ಭಾಷಣದಲ್ಲಿ ಸರ್ಜಿಕಲ್‌ ಸ್ಟ್ರೈಕ್‌, ಎ–ಸ್ಯಾಟ್‌ಗಷ್ಟೇ ಜಾಗ: ಪಿ ಚಿದಂಬರಂ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 2:57 IST
Last Updated 3 ಏಪ್ರಿಲ್ 2019, 2:57 IST
 ಕಾಂಗ್ರೆಸ್‌ ಹಿರಿಯ ಮುಖಂಡ ಪಿ.ಚಿದಂಬರಂ
ಕಾಂಗ್ರೆಸ್‌ ಹಿರಿಯ ಮುಖಂಡ ಪಿ.ಚಿದಂಬರಂ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸರ್ಜಿಕಲ್‌ ಸ್ಟ್ರೈಕ್‌, ಮಿಷನ್ ಶಕ್ತಿ.. ವಿಷಯಗಳ ಬಗ್ಗೆಯೇ ಮಾತನಾಡುತ್ತಾರೆಯೇ ಹೊರತು ದೇಶದಲ್ಲಿನ ನಿಜ ಸಮಸ್ಯೆಗಳ ಬಗ್ಗೆ ಅಲ್ಲ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಪಿ.ಚಿದಂಬರಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

’ರಾಜ್ಯದಿಂದ ರಾಜ್ಯಕ್ಕೆ, ಸಭೆಯಿಂದ ಸಭೆ ನಡೆಸುವ ಮೋದಿ, ಹೋದಲೆಲ್ಲಾ ಕೇವಲ ಉಪಗ್ರಹ ಹೊಡೆದುರುಳಿಸಿದ್ದು, ಪಾಕಿಸ್ತಾನದ ಮೇಲೆ ನಿರ್ಧಿಷ್ಟ ದಾಳಿ ನಡೆಸಿದ್ದರ ಬಗ್ಗೆಯೇ ಮಾತನಾಡುತ್ತಾರೆ. ಉದ್ಯೋಗದ ಸಮಸ್ಯೆ, ರೈತರ ಸಮಸ್ಯೆ, ಮಹಿಳಾ ಭದ್ರತೆ, ಶಿಕ್ಷಣ, ಪೌಷ್ಠಿಕತೆ, ಆರೋಗ್ಯ.. ಹೀಗೆ ದೇಶವನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸುವುದೇ ಇಲ್ಲ ಎಂದರು.

ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆಯನ್ನು ‘ವೋಟಿಗಾಗಿ ನೋಟು’ ಎಂದು ಬಿಜೆಪಿ ಮಾಡಿದ್ದ ಆರೋಪವನ್ನು ತಳ್ಳಿ ಹಾಕಿದ ಅವರು, ಈ ಮಾತು ಮೋದಿ ಅವರು ‘ಕಿಸಾನ್‌ ಯೋಜನೆ’ ಘೋಷಿಸಿದಾಗ ಬಳಸಿದ್ದರೆ ತುಂಬಾ ಸೂಕ್ತ ಎನಿಸುತ್ತಿತ್ತು ಎಂದು ಪ್ರತ್ಯತ್ತರ ನೀಡಿದ್ದಾರೆ.

ADVERTISEMENT

ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆಯಲ್ಲಿರುವುದು ಯೋಜನೆಗಳು ಅವು, ಮುಂದಿನ ಐದು ವರ್ಷಗಳಲ್ಲಿ ಜಾರಿಯಾಗುವಂತಾಗಿವೇ ಹೊರತು ನಾವು ಚುನಾವಣೆಸಂದರ್ಭದಲ್ಲಿ ಯಾವುದೇ ಹಣ ನೀಡುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿಲ್ಲ. ನಮ್ಮ ದೇಶದಲ್ಲಿ ಶೇ 20ರಷ್ಟು ಮಂದಿ ಕಡು ಬಡವರಾಗಿದ್ದಾರೆ. ಅದಕ್ಕಾಗಿಯೇ ನಾವು ಎನ್‌ವೈಎವೈ ಯೋಜನೆಯನ್ನು ಜಾರಿಗೆ ತರಲು ಇಚ್ಛಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

‘ಈ ಯೋಜನೆ ಬಗ್ಗೆ ಬಿಜೆಪಿ ಭಾರಿ ಟೀಕೆ ವ್ಯಕ್ತಪಡಿಸಿದೆ. ಇದು ಬಡತನ ನಿರ್ಮೂಲನೆ ಅಲ್ಲ, ಬಡತನ ಹೆಚ್ಚಿಸುವ ಯೋಜನೆ ಎಂದೆಲ್ಲ ವ್ಯಂಗ್ಯವಾಡಿದ್ದಾರೆ. ಆದರೆ, ಈ ಯೋಜನೆ ಬೇರೆ ರಾಜ್ಯಗಳಲ್ಲಿ ಪ್ರಯೋಗಿಸಲಾಗಿದೆ ಮತ್ತು ಅದು ಯಶಸ್ವಿಯೂ ಆಗಿದೆ’ ಎಂದು ವಿವರಿಸಿದರು.

ಎನ್‌ವೈಎವೈ ಯೋಜನೆ

’ತಜ್ಞರು ಮತ್ತು ಅರ್ಥಶಾಸ್ತ್ರಜ್ಞರನ್ನು ಒಳಗೊಂಡ ತಂಡ ಈ ಯೋಜನೆಯನ್ನು ತುಂಬಾ ಜಾಗರೂಕತೆಯಿಂದ ರೂಪಿಸಲಾಗಿದೆ. ಕ್ಷಿಪ್ರ ಆರ್ಥಿಕ ಬೆಳವಣಿಗೆಯಿಂದ ಬಡತನ ನಿರ್ಮೂಲನೆ ಸಾಧ್ಯ ಎಂದು ತಿಳಿದಿದೆ. ಆದರೆ, ಇದು ದೀರ್ಘಾವಧಿ ಯೋಜನೆಯಾಗುತ್ತದೆ. ಬಡವರು ಎಲ್ಲಿಯವರೆ ಕಾಯುತ್ತಿರಬೇಕು?‘ ಎಂದರು.

ಈ ಯೋಜನೆಯಿಂದ ಸಬ್ಸಡಿಗೆ ಯಾವುದೇ ತೊಂದರೆ ಆಗುವುದಿಲ್ಲ. ಅದಕ್ಕೊಂದು ನಿರ್ಧಿಷ್ಟ ಸಾಮಾಜಿಕ ಆರ್ಥಿಕ ದೃಷ್ಟಿಕೋನವಿದೆ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.