ನವದೆಹಲಿ: ಪ್ರಸಿದ್ಧ ನಟ, ನಿರ್ದೇಶಕ ರಾಜ್ ಕಪೂರ್ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶ್ರದ್ಧಾಂಜಲಿ ಸಲ್ಲಿಸಿದ್ದು, ಅವರನ್ನು ‘ಶಾಶ್ವತ ಶೋಮ್ಯಾನ್’ ಎಂದು ಶ್ಲಾಘಿಸಿದ್ದಾರೆ.
‘ರಾಜ್ ಕಪೂರ್ ಅವರು ದೂರದೃಷ್ಟಿ ಉಳ್ಳ ಸಿನಿಮಾ ನಿರ್ಮಾಪಕ, ನಟ ಆಗಿದ್ದರು. ಅವರೊಬ್ಬ ಶಾಶ್ವತ ಶೋಮ್ಯಾನ್. ಅವರ ಪ್ರತಿಭೆಯು ತಲೆಮಾರುಗಳನ್ನು ಮೀರಿ, ಭಾರತೀಯ ಮತ್ತು ಜಾಗತಿಕ ಚಿತ್ರರಂಗದಲ್ಲಿ ಅಳಿಸಲಾಗದ ಛಾಪು ಮೂಡಿಸಿದೆ’ ಎಂದು ‘ಎಕ್ಸ್’ನಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.
ಕಪೂರ್ ಕುಟುಂಬದ ಸದಸ್ಯರನ್ನು ಪ್ರಧಾನಿ ಇತ್ತೀಚೆಗೆ ಭೇಟಿಯಾಗಿ, ಅವರನ್ನು ಸ್ಮರಿಸಿದ್ದರು. ರಾಜ್ ಕಪೂರ್ 1924ರ ಡಿ.14ರಂದು ಈಗಿನ ಪಾಕಿಸ್ತಾನದಲ್ಲಿರುವ ಪ್ರದೇಶದಲ್ಲಿ ಅಂದಿನ ಜನಪ್ರಿಯ ನಟ ಪೃಥ್ವಿರಾಜ್ ಕಪೂರ್ ಅವರ ಪುತ್ರನಾಗಿ ಜನಿಸಿದ್ದರು.
ದುಡಿಯುವ ವರ್ಗ ಹಾಗೂ ಸಾಮಾನ್ಯ ವ್ಯಕ್ತಿಯ ಚಿತ್ರಣವನ್ನು ತೆರೆಮೇಲೆ ತಂದ ಅವರ ಕಲೆ ದೇಶ, ವಿದೇಶಗಳಲ್ಲಿ ಜನರ ಮನಗೆದ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.