ADVERTISEMENT

ಪಂಜಾಬ್‌: ಆದಂಪುರ ವಿಮಾನ ನಿಲ್ದಾಣಕ್ಕೆ ರವಿದಾಸ್ ಹೆಸರು ಮರುನಾಮಕರಣ ಮಾಡಿದ ಮೋದಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 14:00 IST
Last Updated 1 ಫೆಬ್ರುವರಿ 2026, 14:00 IST
<div class="paragraphs"><p>ಆದಂಪುರ ವಿಮಾನ ನಿಲ್ದಾಣದ ಹೆಸರನ್ನು&nbsp;ಶ್ರೀ ಗುರು ರವಿದಾಸ್ ಮಹಾರಾಜ್‌ ಜಿ ವಿಮಾನ ನಿಲ್ದಾಣ ಎಂದು ಮರುನಾಮಕರಣ ಮಾಡಿದ ಪ್ರಧಾನಿ ನರೇಂದ್ರ ಮೋದಿ </p></div>

ಆದಂಪುರ ವಿಮಾನ ನಿಲ್ದಾಣದ ಹೆಸರನ್ನು ಶ್ರೀ ಗುರು ರವಿದಾಸ್ ಮಹಾರಾಜ್‌ ಜಿ ವಿಮಾನ ನಿಲ್ದಾಣ ಎಂದು ಮರುನಾಮಕರಣ ಮಾಡಿದ ಪ್ರಧಾನಿ ನರೇಂದ್ರ ಮೋದಿ

   

-ಪಿಟಿಐ ಚಿತ್ರ

ಜಲಂಧರ್ (ಪಂಜಾಬ್‌): ಆದಂಪುರ ವಿಮಾನ ನಿಲ್ದಾಣದ ಹೆಸರನ್ನು ‘ಶ್ರೀ ಗುರು ರವಿದಾಸ್ ಮಹಾರಾಜ್‌ ಜಿ ವಿಮಾನ ನಿಲ್ದಾಣ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಮರುನಾಮಕರಣ ಮಾಡಿದರು.

ADVERTISEMENT

ಲುಧಿಯಾನದ ಹಲ್ವಾರಾ ವಿಮಾನ ನಿಲ್ದಾಣದಲ್ಲಿನ ಟರ್ಮಿನಲ್ ಕಟ್ಟಡವನ್ನು ವರ್ಚುವಲ್‌ ಆಗಿ ಇದೇ ಸಂದರ್ಭದಲ್ಲಿ ಉದ್ಘಾಟಿಸಿದರು.

ಸಂಸತ್ತಿನಲ್ಲಿ ಕೇಂದ್ರ ಬಜೆಟ್‌ ಮಂಡನೆಯಾದ ಬಳಿಕ ಪ್ರಧಾನಿ ಅವರು ದೆಹಲಿಯಿಂದ ಮಧ್ಯಾಹ್ನ 3.45ರ ಸುಮಾರಿಗೆ ಆದಂಪುರ ವಿಮಾನ ನಿಲ್ದಾಣ ತಲುಪಿದರು.

ಗುರು ರವಿದಾಸ್ ಅವರ 649ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಮೋದಿ ಅವರು ಡೇರಾ ಸಚಖಂಡ ಬಲ್ಲಾನ್‌ಗೆ ಭೇಟಿ ನೀಡಿದರು.

ರಾಯ್ಕೋಟ್‌ ಉಪವಿಭಾಗದಲ್ಲಿರುವ ಭಾರತೀಯ ವಾಯುಪಡೆಯ ನೆಲೆಯಲ್ಲಿ ಅಭಿವೃದ್ಧಿಪಡಿಸಲಾದ ಸಿವಿಲ್‌ ಟರ್ಮಿನಲ್‌ ಪಂಜಾಬ್‌ನಲ್ಲಿನ ವಾಯುಯಾನ ಮೂಲಸೌಕರ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ. ಈ ಪ್ರದೇಶದಲ್ಲಿ ಕೈಗಾರಿಕಾ ಮತ್ತು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಎಂಬ ನಿರೀಕ್ಷೆಯಿದೆ.

ಪಂಜಾಬ್ ಸರ್ಕಾರ ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಜಂಟಿಯಾಗಿ ₹54.67 ಕೋಟಿ ವೆಚ್ಚದಲ್ಲಿ ಈ ಟರ್ಮಿನಲ್‌ ನಿರ್ಮಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.