ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ದೆಹಲಿ ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ .
ಪಕ್ಷದ ‘ಮೇರಾ ಬೂತ್ ಸಬ್ಸೆ ಮಜ್‌ಬೂತ್‘ ಕಾರ್ಯಕ್ರಮದಡಿಯಲ್ಲಿ ವಿಡಿಯೊ-ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಬುಧವಾರ ಮಧ್ಯಾಹ್ನ 1 ಗಂಟೆಗೆ ಪ್ರಧಾನಿಯವರು ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರೊಂದಗೆ ಸಂವಾದ ನಡೆಸಲಿದ್ದಾರೆ ಎಂದು ನಮೋ ಅಪ್ಲಿಕೇಶನ್‌ನ ರಾಷ್ಟ್ರೀಯ ಸಂಯೋಜಕ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ನಾಯಕ ಕುಲ್ಜೀತ್ ಸಿಂಗ್ ಚಹಲ್ ಮಾಹಿತಿ ನೀಡಿದ್ದಾರೆ.
ಮೇರಾ ಬೂತ್ ಸಬ್ಸೆ ಮಜ್‌ಬೂತ್ ಕಾರ್ಯಕ್ರಮದಡಿಯಲ್ಲಿ, ದೆಹಲಿಯ ಎಲ್ಲಾ 256 ವಾರ್ಡ್‌ಗಳಲ್ಲಿರುವ 13,033 ಬೂತ್‌ಗಳ ಪಕ್ಷದ ಕಾರ್ಯಕರ್ತರು ವೀಡಿಯೊ ಕರೆ ಮೂಲಕ ಪ್ರಧಾನ ಮಂತ್ರಿಯ ಸಂದೇಶವನ್ನು ಆಲಿಸುತ್ತಾರೆ. ಅವರಲ್ಲಿ ಕೆಲವರು ಸಂಭಾಷಣೆಯಲ್ಲಿ ಮೋದಿಯೊಂದಿಗೆ ತೊಡಗಿಸಿಕೊಳ್ಳಲು ಅವಕಾಶವನ್ನು ಪಡೆಯಲಿದ್ದಾರೆ ಎಂದು ಚಹಲ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.