ನವದೆಹಲಿ: ದೇಶದ ಮೊಟ್ಟ ಮೊದಲ ಪೂರ್ಣ ಆಟೊಮ್ಯಾಟಿಕ್ ಚಾಲಕರಹಿತ ಮೆಟ್ರೊ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಡಿ.28ರಂದು ದೆಹಲಿಯಲ್ಲಿ ಚಾಲನೆ ನೀಡಲಿದ್ದಾರೆ ಎಂದು ದೆಹಲಿ ಮೆಟ್ರೊ ರೈಲು ನಿಗಮವು(ಡಿಎಂಆರ್‌ಸಿ) ಗುರುವಾರ ತಿಳಿಸಿದೆ.
ದೆಹಲಿಯ ಜನಕಪುರಿ ವೆಸ್ಟ್‌ನಿಂದ ಬೊಟಾನಿಕಲ್ ಗಾರ್ಡನ್‌ವರೆಗಿನ 37 ಕಿ.ಮೀ ನೀಲಿ ಮಾರ್ಗದಲ್ಲಿ ಈ ಅತ್ಯಾಧುನಿಕ ರೈಲು ಸಂಚರಿಸಲಿದೆ. ಇದರ ಜೊತೆಗೆ 23 ಕಿ.ಮೀ ವಿಮಾನ ನಿಲ್ದಾಣದ ಮಾರ್ಗದಲ್ಲಿ ಸಂಚರಿಸಲು ಏಕೀಕೃತ ಮೊಬಿಲಿಟಿ ಕಾರ್ಡ್(ಎನ್‌ಸಿಎಂಸಿ) ಅನ್ನೂ ಇದೇ ವೇಳೆ ಬಿಡುಗಡೆಗೊಳಿಸಲಾಗುವುದು. ಈ ಕಾರ್ಯಕ್ರಮವು ವಿಡಿಯೊಕಾನ್ಫರೆನ್ಸ್ ಮುಖಾಂತರವೇ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ಡಿಎಂಆರ್‌ಸಿ ತಿಳಿಸಿದೆ.
ದೇಶದಾದ್ಯಂತ ಇರುವ ಮೆಟ್ರೊ ರೈಲು, ಬಸ್‌ಗಳಲ್ಲಿ ಸಂಚರಿಸಲು ಅನುಕೂಲವಾಗುವಂತೆ ಎನ್‌ಸಿಎಂಸಿ ಕಾರ್ಡ್(ಒಂದು ದೇಶ ಒಂದು ಕಾರ್ಡ್) ಬಳಕೆಗೆ 2019 ಮಾರ್ಚ್‌ನಲ್ಲಿ ಮೋದಿ ಚಾಲನೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.