ADVERTISEMENT

ಪ್ರಧಾನಿ ನರೇಂದ್ರ ಮೋದಿ ಮೇಘಾಲಯ ಪ್ರವಾಸ ಇಂದು: ತುರಾದಲ್ಲಿ ರೋಡ್​ಶೋ, ಭಾಷಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಫೆಬ್ರುವರಿ 2023, 2:30 IST
Last Updated 24 ಫೆಬ್ರುವರಿ 2023, 2:30 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ತುರಾ: ಫೆಬ್ರುವರಿ 27ರಂದು ಮೇಘಾಲಯದಲ್ಲಿ 60 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿರುವ ಹಿನ್ನೆಲೆ ಇಂದು (ಶುಕ್ರವಾರ) ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಪ್ರವಾಸ ಕೈಗೊಂಡಿದ್ದಾರೆ.

ಮೇಘಾಲಯದ ತುರಾದಲ್ಲಿ ಇಂದು ಮೋದಿ ರೋಡ್​ಶೋ ನಡೆಸಲಿದ್ದು, ಬಳಿಕ ಬೃಹತ್ ಸಮಾವೇಶ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ನಗರದ ಹೃದಯಭಾಗದಲ್ಲಿರುವ ಖಿಂದೈಲಾದ್ ಪ್ರದೇಶದಲ್ಲಿ ನಡೆಯುವ ರೋಡ್‌ಶೋನಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ ಮತ್ತು ರಾಜ್ಯದ ಮೂವರು ಸ್ವಾತಂತ್ರ್ಯ ಹೋರಾಟಗಾರರಾದ ಯು ಟಿರೋಟ್ ಸಿಂಗ್, ಯು ಕಿಯಾಂಗ್ ನಂಗ್ಬಾ ಮತ್ತು ಪಾ ಟೋಗನ್ ಸಂಗ್ಮಾ ಅವರಿಗೆ ಬೆಳಗ್ಗೆ 11 ಗಂಟೆ ಸುಮಾರಿಗೆ ಪುಷ್ಪ ನಮನ ಸಲ್ಲಿಸಿ ನಂತರ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಬಿಜೆಪಿ ಮೇಘಾಲಯದ ಅಧ್ಯಕ್ಷ ಅರ್ನೆಸ್ಟ್ ಮಾವ್ರಿ ತಿಳಿಸಿದರು.

ADVERTISEMENT

ರೋಡ್‌ಶೋ ನಂತರ ಪ್ರಧಾನಿ ಮೋದಿ ಅವರು ಮಧ್ಯಾಹ್ನ ಪಶ್ಚಿಮ ಗರೋ ಹಿಲ್ಸ್ ಜಿಲ್ಲೆಯ ತುರಾಗೆ ತೆರಳಲಿದ್ದು, ಅಲ್ಲಿ ಬಿಸಿಸಿಐ ಅನುದಾನಿತ ಅಲೋಟ್ಗ್ರೆ ಕ್ರೀಡಾಂಗಣದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

₹127 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪಿ.ಎ. ಸಂಗ್ಮಾ ಕ್ರೀಡಾಂಗಣದಲ್ಲಿ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಬೇಕಿತ್ತು. ಆದರೆ ಸುರಕ್ಷತಾ ಕ್ರಮ ಉಲ್ಲೇಖಿಸಿ ಕ್ರೀಡಾ ಇಲಾಖೆ ಮೋದಿ ಭಾಷಣಕ್ಕೆ ಅನುಮತಿ ನಿರಾಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.