ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿನ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆಯನ್ನು ಶುಕ್ರವಾರ ಉದ್ಘಾಟಿಸಲಿದ್ದಾರೆ.
ಇದೇ ವೇಳೆ ₹46,000 ಕೋಟಿಗೂ ಅಧಿಕ ವೆಚ್ಚದ ಯೋಜನೆಗಳಿಗೆ ಜಮ್ಮು ಮತ್ತು ಕಾಶ್ಮೀರದ ಕಟ್ರಾದಲ್ಲಿ ಚಾಲನೆ ನೀಡಲಿದ್ದಾರೆ. ಉಧಂಪುರ–ಶ್ರೀನಗರ–ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆ (ಯುಎಸ್‌ಬಿಆರ್‌ಎಲ್) ಮತ್ತು ಕಟ್ರಾ–ಶ್ರೀನಗರ ಸಂಚರಿಸುವ ವಂದೇ ಭಾರತ ರೈಲಿಗೂ ಹಸಿರು ನಿಶಾನೆ ತೋರಲಿದ್ದಾರೆ.
ಚೆನಾಬ್ ಸೇತುವೆಯ ವೈಶಿಷ್ಟ್ಯ
359 ಮೀಟರ್: ನದಿಮಟ್ಟದಿಂದ ಸೇತುವೆಯ ಎತ್ತರ
1315 ಮೀಟರ್: ಕಮಾನು ಸೇತುವೆಯ ಉದ್ದ
ವಿಶ್ವವಿಖ್ಯಾತ ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರ
ಯುಎಸ್‌ಬಿಆರ್‌ಎಲ್ ವಿಶೇಷತೆ
₹43780 ಕೋಟಿ: ಯೋಜನೆಗೆ ತಗುಲಿದ ವೆಚ್ಚ
272 ಕಿ.ಮೀ: ಯೋಜನೆಯ ಉದ್ದ
36 ಯೋಜನೆ: ಒಳಗೊಂಡಿ ಸುರಂಗಗಳು
943 ಯೋಜನೆ: ಒಳಗೊಂಡ ಸೇತುವೆಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.