ADVERTISEMENT

ತಾಯಿಯ ಅಂತ್ಯಕ್ರಿಯೆ ಬಳಿಕ ಕರ್ತವ್ಯಕ್ಕೆ ಮರಳಿದ ಮೋದಿ: ಹಲವು ಕಾಮಗಾರಿಗಳಿಗೆ ಚಾಲನೆ

ಪಿಟಿಐ
Published 30 ಡಿಸೆಂಬರ್ 2022, 12:19 IST
Last Updated 30 ಡಿಸೆಂಬರ್ 2022, 12:19 IST
   

ಕೋಲ್ಕತ್ತ/ನವದೆಹಲಿ: ಗುಜರಾತ್‌ನ ಗಾಂಧಿನಗರದಲ್ಲಿ ತಾಯಿ ಹೀರಾಬೆನ್ ಅಂತ್ಯಸಂಸ್ಕಾರ ನೆರವೇರಿಸಿ ಪ್ರಧಾನಿ ನರೇಂದ್ರ ಮೋದಿ ಕರ್ತವ್ಯಕ್ಕೆ ಮರಳಿದ್ದಾರೆ.

ಹೌರಾ ಮತ್ತು ನ್ಯೂ ಜಲಪಾಯ್‌ಗುರಿ ನಡುವಿನ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ.

ಕೋಲ್ಕತ್ತಾ ಮೆಟ್ರೋ ರೈಲು ಪರ್ಪಲ್ ಲೈನ್‌ನ ಜೋಕಾ-ತಾರಾಟಾಲಾ ವಿಸ್ತರಣೆ ಮತ್ತು ನ್ಯೂ ಜಲಪಾಯ್‌ಗುರಿ ರೈಲು ನಿಲ್ದಾಣದಲ್ಲಿ ಅಭಿವೃದ್ಧಿಕೆಲಸಗಳು ಸೇರಿದಂತೆ ಇತರೆ ರೈಲ್ವೆ ಯೋಜನೆಗಳನ್ನುಉದ್ಘಾಟಿಸಿದ್ದಾರೆ.

ADVERTISEMENT

ಇಂದು ಬೆಳಿಗ್ಗೆ ಅವರು ₹7,800 ಕೋಟಿ ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಬೇಕಿತ್ತು. ತಾಯಿ ನಿಧನದ ಹಿನ್ನೆಲೆಯಲ್ಲಿ ಅವರು ದಿಢೀರ್ ಅಹಮದಾಬಾದ್‌ಗೆ ತೆರಳಿದ್ದರು.

ಇದರಲ್ಲಿ ₹2,550 ಕೋಟಿ ವೆಚ್ಚದ ಒಳಚರಂಡಿ ಮೂಲಸೌಕರ್ಯ ಯೋಜನೆಗಳು ಸೇರಿವೆ.

ವಿಚಾರವಾದಿ ಶ್ಯಾಮ ಪ್ರಸಾದ್ ಮುಖರ್ಜಿ ಅವರ ಹೆಸರಿನ ರಾಷ್ಟ್ರೀಯ ನೀರು ಮತ್ತು ನೈರ್ಮಲ್ಯ ಸಂಸ್ಥೆಯನ್ನು ಮೋದಿ ಉದ್ಘಾಟಿಸಿದ್ದಾರೆ.

ಮೋದಿ ಅವರು ಕೋಲ್ಕತ್ತಾದಲ್ಲಿ ರಾಷ್ಟ್ರೀಯ ಗಂಗಾ ಪರಿಷತ್ತಿನ (ಎನ್‌ಜಿಸಿ) ಎರಡನೇ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.