ADVERTISEMENT

ಪಶ್ಚಿಮ ಬಂಗಾಳ, ಅಸ್ಸಾಂಗೆ ಇಂದು ಭೇಟಿ ನೀಡಲಿದ್ದಾರೆ ಪ್ರಧಾನಿ ಮೋದಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 4:50 IST
Last Updated 7 ಫೆಬ್ರುವರಿ 2021, 4:50 IST
ನರೇಂದ್ರ ಮೋದಿ (ಸಂಗ್ರಹ ಚಿತ್ರ)
ನರೇಂದ್ರ ಮೋದಿ (ಸಂಗ್ರಹ ಚಿತ್ರ)   

ಕೋಲ್ಕತ್ತ/ಗುವಾಹಟಿ: ಚುನಾವಣೆ ಸಮೀಪಿಸುತ್ತಿರುವ ಪಶ್ಚಿಮ ಬಂಗಾಳ, ಅಸ್ಸಾಂಗೆ ಇಂದು (ಭಾನುವಾರ) ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

11.45ಕ್ಕೆ ಅಸ್ಸಾಂನ ಸೋಂತಿಪುರ ಜಿಲ್ಲೆಗೆ ಭೇಟಿ ನೀಡಲಿರುವ ಮೋದಿ ಅವರು ರಾಜ್ಯ ಹೆದ್ದಾರಿಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ‘ಅಸೋಮ್ ಮಾಲಾ’ ಉದ್ಘಾಟಿಸಲಿದ್ದಾರೆ. ಬಿಸ್ವನಾಥ್ ಮತ್ತು ಚರೈದೆಯೊ ಜಿಲ್ಲೆಗಳಲ್ಲಿ ಎರಡು ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ₹1,100 ಕೋಟಿ ವೆಚ್ಚದಲ್ಲಿ ಈ ಎರಡು ಕಾಲೇಜುಗಳ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಎರಡೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು 500 ಹಾಸಿಗೆ ಸಾಮರ್ಥ್ಯದ್ದಾಗಿರಲಿದ್ದು, 100 ಎಂಬಿಬಿಎಸ್ ಸೀಟುಗಳನ್ನು ಒಳಗೊಂಡಿರಲಿವೆ.

ಸಂಜೆ 4.50ಕ್ಕೆ ಪಶ್ಚಿಮ ಬಂಗಾಳದ ಹಾಲ್ದಿಯಾ ತಲುಪಲಿರುವ ಪ್ರಧಾನಿ ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ.

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ನಿರ್ಮಿಸಿರುವ ‘ಎಲ್‌ಪಿಜಿ ಇಂಪೋರ್ಟ್ ಟರ್ಮಿನಲ್’ ಅನ್ನು ಮೋದಿ ಅವರು ದೇಶಕ್ಕೆ ಸಮರ್ಪಣೆ ಮಾಡಲಿದ್ದಾರೆ. ₹1,100 ಕೋಟಿ ವೆಚ್ಚದಲ್ಲಿ ಈ ಟರ್ಮಿನಲ್ ನಿರ್ಮಾಣ ಮಾಡಲಾಗಿದೆ.

ಬಳಿಕ ಮೋದಿ ಅವರು ಸಾರ್ವಜನಿಕ ರ್‍ಯಾಲಿ ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ.

ಅಸ್ಸಾಂನಲ್ಲಿ ಮೋದಿ ಸ್ವಾಗತಕ್ಕೆ ಸಿದ್ಧತೆ – ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.