ADVERTISEMENT

ಸೋನಿಯಾ ಗಾಂಧಿ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ ಪ್ರಧಾನಿ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಡಿಸೆಂಬರ್ 2022, 3:50 IST
Last Updated 9 ಡಿಸೆಂಬರ್ 2022, 3:50 IST
   

ಕಾಂಗ್ರೆಸ್‌ ಮುಖಂಡೆ ಹಾಗೂ ರಾಜಕೀಯ ಎದುರಾಳಿ ಸೋನಿಯಾ ಗಾಂಧಿ ಅವರಿಗೆ ಪ್ರಧಾನಿ ಮೋದಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.


‘ಸೋನಿಯಾ ಗಾಂಧಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಭಗವಂತ ದೀರ್ಘಾಯುಷ್ಯ ಮತ್ತು ಆರೋಗ್ಯ ಕರುಣಿಸಲಿ’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.


ರಣ್‌ಥಾಂಬೋರ್‌ನಲ್ಲಿ ಸೋನಿಯಾ ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಪ್ರಿಯಾಂಕ ಗಾಂಧಿ ಮತ್ತು ರಾಹುಲ್‌ ಗಾಂಧಿ ಕೂಡ ತಾಯಿಯ ಹುಟ್ಟು ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ. ಭಾರತ್‌ ಜೋಡೊ ಯಾತ್ರೆಗೆ ಇಂದು ವಿರಾಮ ನೀಡಲಾಗಿದೆ.

ADVERTISEMENT


ಭಾರತ್‌ ಜೋಡೊ ಯಾತ್ರೆ ರಾಜಸ್ಥಾನದಲ್ಲಿದೆ. ಹೀಗಾಗಿ ಸೋನಿಯಾ ಗುರುವಾರ ಜೈಪುರಕ್ಕೆ ಬಂದಿಳಿದಿದ್ದಾರೆ. ಮಧ್ಯಾಹ್ನ ಹೆಲಿಕಾಫ್ಟರ್‌ನಲ್ಲಿ ಸವೈ ಮಧೋಪುರ್‌ಗೆ ತೆರಳಿದ್ದಾರೆ. ಅಲ್ಲಿಂದ ರಣ್‌ಥಾಂಬೋರ್‌ನ ಶೇರ್‌ ಭಾಗ್‌ ಹೋಟೆಲ್‌ನಲ್ಲಿ ಸೋನಿಯಾ ತಂಗಿದ್ದು, ಅಲ್ಲಿಯೇ ಹುಟ್ಟು ಹಬ್ಬದ ಆಚರಣೆ ನಡೆಯಲಿದೆ. ಸ್ಥಳೀಯ ಆಡಳಿತ ಹಾಗೂ ಪಕ್ಷದ ಮುಖಂಡರು ಸಂಭ್ರಮಕ್ಕೆ ಅಗತ್ಯ ಸಿದ್ಧತೆ ನಡೆಸಿದ್ದಾರೆ. ಕಾಂಗ್ರೆಸ್‌ನ ಹಿರಿಯ ಮುಖಂಡರು ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.