ADVERTISEMENT

ಮೋದಿ ಗ್ಯಾರಂಟಿಗಳು 24 ಕ್ಯಾರೆಟ್ ಚಿನ್ನ: ರಕ್ಷಣಾ ಸಚಿವ ರಾಜನಾಥ್ ಸಿಂಗ್

ಜೈಪುರದಲ್ಲಿ ಹೇಳಿಕೆ

ಪಿಟಿಐ
Published 7 ಏಪ್ರಿಲ್ 2024, 14:58 IST
Last Updated 7 ಏಪ್ರಿಲ್ 2024, 14:58 IST
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್   

ಜೈಪುರ: ಪ್ರಧಾನಿ ಮೋದಿ ಅವರ ಗ್ಯಾರಂಟಿಗಳು 24 ಕ್ಯಾರೆಟ್ ಚಿನ್ನದಂತೆ ಪರಿಶುದ್ಧ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಲೋಕಸಭೆ ಚುನಾವಣೆ ಪ್ರಯುಕ್ತ ಜೈಪುರದಲ್ಲಿ ನಡೆದ ಬಿಜೆಪಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾಂಗ್ರೆಸ್‌ ನೀಡಿರುವ, ನೀಡುತ್ತಿರುವ ಗ್ಯಾರಂಟಿಗಳ ಹಾಗೇ ಮೋದಿ ಗ್ಯಾರಂಟಿಗಳಲ್ಲ. ಅವರು ಏನು ಹೇಳುವರೋ ಅವನ್ನು ಮಾಡಿ ಮುಗಿಸುವವರು ಎಂದು ಹೇಳಿದ್ದಾರೆ.

ADVERTISEMENT

ನುಡಿದಂತೆ ನಡೆಯುವ ಪಕ್ಷ ರಾಷ್ಟ್ರದಲ್ಲಿ ಬಿಜೆಪಿ ಮಾತ್ರ ಎಂದು ಅವರು ಹೇಳಿದ್ದಾರೆ.

ರಾಜಸ್ಥಾನದಲ್ಲಿ ಏಪ್ರಿಲ್ 19 ಮೊದಲ ಹಂತ ಹಾಗೂ ಏಪ್ರಿಲ್ 26 ಎರಡನೇ ಹಂತದ ಚುನಾವಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.